Breaking News

ಯಜಮಾನ ಯಾವ ದಿಕ್ಕಿನಲ್ಲಿ ಕೂತುಕೊಳ್ಳಬೇಕು ಗೊತ್ತಾ..?

SHARE......LIKE......COMMENT......

ವಾಸ್ತು ಟಿಪ್ಸ್:

ಅಂಗಡಿಗಳು ವ್ಯಾಪಾರದ ಅಥವಾ ಬ್ಯುಸಿನೆಸ್‌ ಸ್ಥಳ. ರೆಸ್ಟೋರೆಂಟಿನಿಂದ ಹಿಡಿದು ಕೈಗಾರಿಕಾ ಘಟಕವಾಗಿ ಪುಟ್ಟ ವಿಸ್ತಾರ ಪಡೆದಿದ್ದರೂ ಸರಿಯೇ. ಡಿಸ್ಟ್ರಿಬ್ಯೂಶನ್‌ ಕೇವಲ ಫೋನ್‌ ಕರೆ, ಇಂಟರ್‌ ನೆಟ್‌ಗಳ ಮೂಲಕ ವ್ಯವಹಾರ ವಹಿವಾಟು ನಡೆಸುವುದಾದರೂ ಸರಿಯೇ. ನೈಋತ್ಯವೇ ಯಜಮಾನನಿಗೆ ಪ್ರಧಾನವಾದ ಸಂಪನ್ನತೆಗಾಗಿನ ಭಾಗ ಅಂಗಡಿಯಲ್ಲಿ ನೈಋತ್ಯ ಮೂಲೆಯಲ್ಲಿ ಯಜಮಾನ ಅಥವಾ ಯಜಮಾನತಿ ಕುಳಿತಿರಬೇಕು ಈ ಮೂಲೆ ಕೊಂಚ ಎತ್ತರವಾಗಿರಬೇಕು.

ಯಾವುದೇ ದೈವಿಕ ಪೂಜಾ ಕೆಲಸಗಳಿಗಾಗಿ ಸಂಬಂಧಿಸಿದ ಮೂರ್ತಿ ಅಥವಾ ಸ್ತುತಿ ಈಶಾನ್ಯದಲ್ಲೇ ನಡೆಯಲಿ ಕಸಬರಿಗೆ ಒರೆಸುವ ವಸ್ತ್ರ, ಟಾಯ್ಲೆಟ್‌ ಸಲಕರಣೆಗಳು ನ್ಯಾಪ್‌ಕಿನ್‌, ಪೇಪರ್‌ ಕಬ್ಬಿಣದ ತ್ಯಾಜ್ಯಗಳನ್ನು ಈಶಾನ್ಯ ಅಥವಾ ವಾಯುವ್ಯ ನೈಋತ್ಯ ವಹಿವಾಟಿನ ಜಾಗೆಯಲ್ಲಿ ಇಡಬೇಡಿ. ದೇವರನ್ನಿಡುವ ಜಾಗದಲ್ಲಿ ಚಿಕ್ಕದೊಂದು ಕ್ರಿಷ್ಟಲ್‌ ಪಿರಮಿಡ್‌ ಅಥವಾ ಅಭಿಮಂತ್ರಿಸಿದ ಶಂಖ, ಗದಾ, ಧಾತು, ಸಮಷ್ಟಿ ಸಂಪುಟಗಳು ಇದ್ದಿರಲಿ. ಸಮಸ್ಯೆಗಳೇನೂ ಇಲ್ಲ.

ಅತಿಯಾದ ಅಲಂಕಾರಗಳು ಬೇಡ. ಯಜಮಾನ / ಒಡತಿಯ ಹಿಂದಗಡೆಯ ದಕ್ಷಿಣ ದಿಕ್ಕಿಗೋ ವಿಸ್ತರಿಸಿದ ಜಾಗೆಯಲ್ಲಿ ಕನ್ನಡಿಯ ಜೋಡಣೆ ಅಥವಾ ದೇವರ ಮೂರ್ತಿ ಅಥವಾ ಚಿತ್ರಗಳು ಬೇಡ. ನಿಮ್ಮ ನಿಮ್ಮ ಜಾತಕದ ಆಧಾರದಲ್ಲಿ ದೇವರ ಸಲುವಾಗಿನ ಆರಾಧನೆಗಾಗಿನ ಹೂವುಗಳ ಬಣ್ಣ ಇರಲಿ. ನೈಋತ್ಯ ದಿಕ್ಕಿನಲ್ಲಿ ಸಿಮೆಂಟಿನ ಕಟ್ಟೆ  ಸಮಾವೇಶಗೊಳಿಸಿ, ಅಲ್ಲಿ ಆರಾಧನೆಗಾಗಿನ ಸಲಕರಣೆಗಳು ಇಡಲ್ಪಟ್ಟರೆ ತೊಂದರೆಗಳಿಲ್ಲ.

ವಾಯುವ್ಯ ಮೂಲೆಯಲ್ಲಿನ ಪಶ್ಚಿಮದ ಭಾಗದಲ್ಲಿ ಮೆಟ್ಟಿಲುಗಳು ಇದ್ದು ಅಂಗಡಿಯ ಒಳಬರಲು ಸಾಧ್ಯವಾಗುವ ಹಾಗೆ ರಚನೆ ಇರಲಿ. ವ್ಯಾಪಾರದ ವಾಣಿಜ್ಯದ ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುವ ಮಾತುಕತೆಗಳ ಕಾಲದಲ್ಲಿ ಹೊರರಸ್ತೆಯ ಧೂಳು ಬರದಂತೆ ಬಾಗಿಲು ಮುಚ್ಚಿರಲಿ. ರೆಸ್ಟೋರಂಟ್‌ಗಳಾದರೆ ಸ್ಪಾಂಜ್‌ ಬಳಸಿದ ದ್ರಾವಣ, ಪ್ಲಾಸ್ಟಿಕ್‌ ಕಸಬರಿಕೆ, ಉದ್ದನೆಯ ಕೋಲಿಗೆ ಕಟ್ಟಿದ ನೆಲ ಒರೆಸುವ ಮಾಪು ನಡೆಯಲಿ.

ಗ್ರಾಹಕರಿಗೆ ದ್ರಾವಣ ಸಿಡಿಯದಂತೆ, ಕಸಬರಿಕೆ ಸೋರದಂತೆ ಎಚ್ಚರಿಕೆ ವಹಿಸಿ. ಕೆಲಸಗಾರರಿಗೆ ಈ ಕುರಿತು ಸರಳವಾದ ಬೋಧನೆ ಮಾಡಿ. ಯಜಮಾನನ ಜಾತಕಕ್ಕೆ ಹೊಂದುವ ಬಣ್ಣದ ಅನುಸಾರ ಕೆಲಸಗಾರರ ಸಮವಸ್ತ್ರವಿರಲಿ. ಎಲ್ಲವೂ ಸರಿಯಾಗಿದ್ದರೆ ಲಕ್ಷ್ಮೀಯ ಚಿತ್ತ ಆನಂದವಾಗಿರುತ್ತದೆ…..