Breaking News

ಅಧಿವೇಶನಕ್ಕೆ ತಟ್ಟಲಿದೆ ಕಬ್ಬಿನ ಬಾಕಿ ಬಿಸಿ..!

ಕಬ್ಬು ಬೆಳೆಗಾರರು V/S ಸಕ್ಕರೆ ಕಾರ್ಖಾನೆಗಳ ಮಧ್ಯೆ ಸಂಘರ್ಷ ಶುರು...

SHARE......LIKE......COMMENT......

ಬೆಳಗಾವಿ:

ಉತ್ತರ ಕರ್ನಾಟಕದಲ್ಲಿ ಮತ್ತೆ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಧ್ಯೆ ದರ ಸಂಘರ್ಷ ಆರಂಭವಾಗಿದೆ. ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್‌ದಲ್ಲಿ ಚಳಿಗಾಲ ಅಧಿವೇಶನ ನಡೆಯಲಿರುವುದರಿಂದ ಮತ್ತೆ ಅಧಿವೇಶನಕ್ಕೆ ಕಬ್ಬಿನ ಬಾಕಿ ಬಿಸಿ ತಟ್ಟುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.

ಕಳೆದ ಹಂಗಾಮು ಮುಗಿದ ಬೆನ್ನಲ್ಲೇ ಬಾಕಿ ಹಣ ಪಾವತಿ ಹಾಗೂ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದಾರೆ. ಈ ಹಂಗಾಮಿನಲ್ಲಿ ದರ ಘೋಷಣೆ ಮಾಡಿಯೇ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಬೆಳಗಾವಿ ಜಿಲ್ಲೆಯ 23 ಕಾರ್ಖಾನೆಗಳು ಸೇರಿದಂತೆ ರಾಜ್ಯದ 65 ಕಾರ್ಖಾನೆಗಳು ಇದೂವರೆಗೆ ದರ ನಿಗದಿ ಮಾಡಿಲ್ಲ. ಕಬ್ಬು ನುರಿಸುವ ಕಾರ್ಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದರೂ ದರ ನಿಗದಿಯ ಮಾತಿಲ್ಲ. ಇನ್ನೊಂದು ಕಡೆ ರೈತರಿಗೆ ನೂರಾರು ಕೋಟಿ ಬಾಕಿ ಹಣ ಬರಬೇಕಿದೆ. ಇದಕ್ಕೆ ಯಾವ ಕಾರ್ಖಾನೆಗಳೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ರೈತರು ಪ್ರತಿ ಟನ್‌ಗೆ 3000 ದರ ನೀಡಲೇಬೇಕೆಂದು ಪಟ್ಟು ಹಿಡಿದಿದ್ದು ಹಗ್ಗ-ಜಗ್ಗಾಟ ಮುಂದುವರಿದಿದೆ.

ಈ ವರ್ಷ ಕೇಂದ್ರ ಸರ್ಕಾರ ಶೇ. 10ರವರೆಗೆ 2750 ರೂ. ದರ ನಿಗದಿ ಮಾಡಿದೆ. ಇದು ರೈತರಿಗೆ ಮಾಡಿದ ಮೊದಲ ಅನ್ಯಾಯ. ಕನಿಷ್ಠ 3000 ರೂ. ದರ ನಿಗದಿ ಮಾಡಬೇಕಿತ್ತು. ರಾಜ್ಯ ಸರ್ಕಾರ ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ನಿಗದಿ ಮಾಡಲು ಮನಸ್ಸೇ ಮಾಡುತ್ತಿಲ್ಲ. ಈ ಸಂಬಂಧ ಸಭೆಗಳೂ ನಡೆದಿಲ್ಲ. ರೈತರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ ಎಂಬುದು ಮುಖಂಡರ ಆರೋಪ……