ಸಿನಿಮಾ:
ನನ್ನ ಅಭಿಮಾನಿಗಳನ್ನು ಕೆಣಕಬೇಡಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಚ್ಚರಿಕೆ ನೀಡಿದ್ದಾರೆ.ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ವದಂತಿಗಳಿಗೆ, ಕೆಲವು ವ್ಯಕ್ತಿಗಳಿಗೆ ದರ್ಶನ್ ಒಂದು ಕಿವಿಮಾತು ಹೇಳಿದ್ದು, ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಪ್ರಚೋದಿಸಲು ಬರದಿರಿ ಎನ್ನುವ ಸಂದೇಶವನ್ನು ದರ್ಶನ್ ಟ್ವೀಟ್ ಮಾಡಿವ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ದಾಸನ ಫ್ಯಾನ್ಸ್, ಪತ್ರವೊಂದನ್ನು ಹಾಕಿದ್ದು, ಆ ಚಿತ್ರ ಪೈರಸಿ ಆಗೋದಕ್ಕೆ ನಾವು ಕಾರಣವಲ್ಲ. ನಮ್ಮ ನಟನ ಹೆಸರು ದುರುಪಯೋಗ ಪಡಿಸಿಕೊಳ್ತಿದ್ದಾರೆ. ಜೊತೆಗೆ ಅಪಪ್ರಚಾರ ಮಾಡ್ತಿದ್ದಾರೆ. ಇದು ಸರಿಯಲ್ಲ ಎಂದು ದರ್ಶನ್ ವಿರೋಧಿಗಳಿಗೆ ಡಿಬಾಸ್ ಫ್ಯಾನ್ಸ್ ಬಹಿರಂಗ ಪತ್ರಬರೆದಿದ್ದಾರೆ. ಇದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದ್ದು, ಕಿಚ್ಚ ಮತ್ತು ದಚ್ಚು ಫ್ಯಾನ್ಸ್ ಮಧ್ಯೆ ಟ್ವೀಟ್ ವಾರ್ ಶುರುವಾಗಿತ್ತು. ಆದರೆ ಇದೀಗ ಸ್ವತಹ ದರ್ಶನ್ ಅವರೇ ಟ್ವೀಟ್ ಮಾಡಿ ನನ್ನ ಅಭಿಮಾನಿಗಳ ವಿಚಾರಕ್ಕೆ ಬರಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ…..
ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು – ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ 😊
— Darshan Thoogudeepa (@dasadarshan) September 17, 2019