Breaking News

ಕ್ರಿಸ್ಪಿ ಈರುಳ್ಳಿ ಪರೋಟ…!

ಈರುಳ್ಳಿ ಪರೋಟ

SHARE......LIKE......COMMENT......

ಕ್ರಿಸ್ಪಿ ಈರುಳ್ಳಿ ಪರೋಟ ಮಾಡುವ ವಿಧಾನ…

ಮಸಾಲೆ ಹೂರಣಕ್ಕೆ ಬೇಕಾಗುವ ಪದಾರ್ಥಗಳು  

  • ಎಣ್ಣೆ- 1 ಚಮಚ
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
  • ಅಚ್ಚ ಖಾರದ ಪುಡಿ – ಅರ್ಧ ಚಮಚ
  • ಅರಿಶಿನ – ಅರ್ಧ ಚಮಚ
  • ಜೀರಿಗೆ ಪುಡಿ – ಮುಕ್ಕಾಲು ಚಮಚ
  • ಉಪ್ಪು- ರುಚಿಗೆ ತಕ್ಕಷ್ಟು
  • ಹುಳಿ ಪುಡಿ (ಮಾವಿನ ಪುಡಿ)- ಅರ್ಧ ಚಮಚ
  • ಗರಂ ಮಸಾಲೆ ಪುಡಿ – ಮುಕ್ಕಾಲು ಚಮಚ
  •  ಕೊತ್ತಂಬರಿ ಸೊಪ್ಪು -ಸ್ವಲ್ಪ

   ಈರುಳ್ಳಿ ಪರೋಟಗೆ ಬೇಕಾಗುವ ಪದಾರ್ಥಗಳು

 

  • ಗೋದಿ ಹಿಟ್ಟು- 2 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ – 1 ಚಮಚ
  • ನೀರು- ಅಗತ್ಯಕ್ಕೆ ತಕ್ಕಷ್ಟು

 

    ಮಾಡುವ  ಸುಲಭ ವಿಧಾನ…

  • ಮೊದಲಿಗೆ ಗೋದಿ ಹಿಟ್ಟು, ಉಪ್ಪು, ನೀರು, ಎಣ್ಣೆ ಹಾಕಿ ಹಿಟ್ಟನ್ನು ತಯಾರು ಮಾಡಿಟ್ಟುಕೊಳ್ಳಬೇಕು. 20 ನಿಮಿಷ ನೆನೆಯಲು ಬಿಡಬೇಕು.
  • ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.
  • ನಂತರ ಅಚ್ಚ ಖಾರದ ಪುಡಿ, ಅರಿಶಿನ, ಉಪ್ಪು, ಜೀರಿಗೆ ಪುಡಿ, ಹುಳಿ ಪುಡಿ, ಗರಂ ಮಸಾಲ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು, ದುಂಡಾಕಾರದಲ್ಲಿ ಲಟ್ಟಿಸಿ, ಮಧ್ಯೆ ಈಗಾಗಲೇ ತಯಾರು ಮಾಡಿಕೊಂಡ ಮಿಶ್ರಣವನ್ನು ಹಾಕಿ ಮತ್ತೆ ಚಪಾತಿಯಾಕಾರದಲ್ಲಿ ಲಟ್ಟಿಸಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಈರುಳ್ಳಿ ಪರೋಟ ಸವಿಯಲು ಸಿದ್ಧ.