ಅಡುಗೆ:
ರಸ್ಲಾ ದಾಲ್ ಸ್ವೀಟ್ ಗೆ ಬೇಕಾಗುವ ಪದಾರ್ಥಗಳು…
*ಕಡಲೆ ಬೇಳೆ- 1 ಬಟ್ಟಲು
*ನೀರು – 3 ಬಟ್ಟಲು
*ಬೆಲ್ಲ- 1 ಬಟ್ಟಲು
*4- ಲವಂಗ
*ತುಪ್ಪ- 2 ಚಮಚ
*ದ್ರಾಕ್ಷಿ, ಗೋಡಂಬಿ- ಸ್ವಲ್ಪ
*ಏಲಕ್ಕಿ ಪುಡಿ – ಮುಕ್ಕಾಲು ಚಮಚ
*ಕೊಬ್ಬರಿ ಪುಡಿ – ಅರ್ಧ ಬಟ್ಟಲು
ರಸ್ಲಾ ದಾಲ್ ಸ್ವೀಟ್ ಮಾಡುವ ಸುಲಭ ವಿಧಾನ…
*ಮೊದಲಿಗೆ ಕುಕ್ಕರ್ ತೆಗೆದುಕೊಂಡು ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು, ಮೂರು ಬಟ್ಟಲು ನೀರು ಹಾಕಿ 3-5 ಕೂಗು ಕೂಗಿಸಿಕೊಳ್ಳಿ.
ನಂತರ ಬೆಂದ ಕಡಲೆಬೇಳೆಯಿಂದ ನೀರನ್ನು ಬಸಿದಿಟ್ಟುಕೊಳ್ಳಿ.
* ಒಲೆಯ ಮೇಲೆ ಬಾಣಲೆಯಿಟ್ಟು, ಅದಕ್ಕೆ ಬೆಂದ ಕಡಲೆಬೇಳೆ, ಬೆಲ್ಲ ಹಾಗೂ ಲವಂಗವನ್ನು ಹಾಕಿ. ಬೆಲ್ಲ ಕರಗುವವರೆಗೂ ಕೈಯಾಡಿಸಿ. ಮಿಶ್ರಣ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಬೇಕು.
*ಚಿಕ್ಕ ಪ್ಯಾನ್’ಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ಇದನ್ನು ಬೆಲ್ಲ ಮಿಶ್ರಿತ ಕಡಲೆಬೇಳೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಏಲಕ್ಕಿ ಪುಡಿ ಹಾಗೂ ಕೊಬ್ಬರಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ರಸ್ಲಾ ದಾಲ್ ಸ್ವೀಟ್ ರೆಡಿ….