ಬೆಂಗಳೂರು:
ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನಕ್ಕೆ ತಾನು ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿರುವ ಬೆನ್ನಿಗೇ.. ಮಾಜಿ ಸಂಸದೆ ರಮ್ಯಾ, ತಾನು ಟ್ವಿಟರ್ನಲ್ಲಿ ಸಕ್ರಿಯವಾಗಿದ್ದೇನೆ ಎಂದು ಸಾಬೀತುಪಡಿಸಲು ತಮ್ಮ ಖಾತೆಯಲ್ಲಿ ಒಂದಷ್ಟು ಅಪ್ಡೇಟ್ಸ್ ಮಾಡಿದ್ದಾರೆ.
ಟ್ವಿಟರ್ ಖಾತೆಯ ಅಬೌಟ್ ಜಾಗದಲ್ಲಿ ಹಿಂದಿನ ಸ್ವವಿವರವನ್ನು ರಿ-ಪೋಸ್ಟ್ ಮಾಡಿದ್ದಾರೆ. ಜತೆಗೆ I ❤ it! ಎಂದು ಸೇರಿಸಿದ್ದಾರೆ. ಅಷ್ಟೇ ಅಲ್ಲ, ಬರೋಬ್ಬರಿ 5 ದಿನಗಳ ಗ್ಯಾಪ್ ನಂತರ ತಾಜಾ ಆಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವ್ರ ಟ್ವೀಟ್ ಅನ್ನು ರಿ-ಟ್ವೀಟ್ ಮಾಡಿದ್ದಾರೆ! ಇದರೊಂದಿಗೆ ತಾನು ಬ್ಯಾಕ್-ಟು-ವರ್ಕ್ ಎಂದು ಸಾರಿದ್ದಾರೆ.
ಈ ಹಿಂದಿನ ವರದಿಗಳ ಪ್ರಕಾರ, ಪಕ್ಷದಲ್ಲಿ ತಮಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ, ಅದ್ರಲ್ಲೂ ಸೋಶಿಯಲ್ ಮೀಡಿಯಾವನ್ನು ತನ್ನಿಂದ ಕಿತ್ತುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಅವರು ಸಿಟ್ಟಿಗೆದ್ದಿದ್ದರು ಎನ್ನಲಾಗಿತ್ತು. ಇದಕ್ಕೆಲ್ಲ ಮಂಗಳ ಹಾಡುವಂತೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಇದೀಗ, ಕಾಂಗ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ……