Breaking News

ಕನ್ನಡ ಬಾರದವರಿಗೆ ಅಂಚೆ ಮೂಲಕ ಶಿಕ್ಷಣ..!

ಸರಕಾರಿ ನೌಕರರಿಗೆ ಕನ್ನಡ ಕಡ್ಡಾಯ....

SHARE......LIKE......COMMENT......

ಮೈಸೂರು:

ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಕನ್ನಡ ಗೊತ್ತಿಲ್ಲದೆ ಕೆಲಸ ಮಾಡುತ್ತಿರುವ ನೌಕರರಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಸಹಯೋಗದಲ್ಲಿ ಅಂಚೆ ಮೂಲಕ ಕನ್ನಡ ಶಿಕ್ಷಣ ನೀಡಲು ಅರ್ಜಿ ಆಹ್ವಾನಿಸಿದೆ. ಈ ಬಾರಿಯ ವಿಶೇಷವೇನಂದರೆ ಈ ಯೋಜನೆಯನ್ನು ಸಾರ್ವಜನಿಕರು ವಿಸ್ತರಿಸಲಾಗಿದೆ.

ರಾಜ್ಯದಲ್ಲಿ ಸರಕಾರಿ ನೌಕಕರಿಗೆ ಕನ್ನಡ ಕಡ್ಡಾಯವಾಗಿದೆ. ಕನ್ನಡತೇರರು ಕನ್ನಡ ಕಲಿಯಲು ಸಾಹಸ ಪಡೆಬೇಕಿಲ್ಲ, ಇವರಿಗೆ ಹಾಗೂ ಅನ್ಯ ಭಾಷಿಕರಿಗೆ, ಆಸ್ತಕರಿಗೆ 12 ತಿಂಗಳ ಕನ್ನಡ ಕಲಿಕೆ ತರಬೇತಿಯನ್ನು ಅಂಚೆ ಶಿಕ್ಷಣ ಮೂಲಕ ತರಬೇತಿ ಪಡೆಯಬಹುದಾಗಿದೆ.

ಕನ್ನಡ ಶಿಕ್ಷಣ ಪಡೆಯಲು ಕರ್ನಾಟಕದಲ್ಲಿರುವ ನಗರಸಭೆ, ಕೆಎಸ್‌ಆರ್‌ಟಿಸಿ, ವಿಶ್ವವಿದ್ಯಾಲಯ, ಶಾಲಾ ಕಾಲೇಜು ಸೇರಿದಂತೆ ಸರಕಾರದ ಕಚೇರಿಗಳು, ನಿಗಮಗಳಲ್ಲಿ ಕಾರ‍್ಯ ನಿರ್ವಹಿಸುತ್ತಿರುವ ಸರಕಾರಿ ಅಧಿಕಾರಿಗಳು ಹಾಗೂ ಅನುದಾನ ಪಡೆಯುವ ಸಂಸ್ಥೆಗಳ ನೌಕರರು, ರಾಷ್ಟ್ರೀಕೃತ ಬ್ಯಾಂಕ್‌ ನೌಕರರು ಅರ್ಹರಾಗಿದ್ದು, ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.

ಸಂಪರ್ಕ ಶಿಬಿರಗಳಿಗೆ ಭಾಗವಹಿಸುವ ನೌಕರರಿಗೆ ಕಚೇರಿ ಗೈರು ಹಾಜರಿಯನ್ನು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುವುದು. ಸರಕಾರಿ ನೌಕಕರಿ ಯಾವುದೇ ಶುಲ್ಕವಿಲ್ಲದೆ. ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರಿಗೆ ಪೋಸ್ಟಲ್‌ ಶುಲ್ಕು ಪಾವತಿಸಬೇಕಾಗಿರುತ್ತದೆ…..

ಹೆಸರು ನೊಂದಾಯಿಸಿಕೊಂಡರಿಗೆ ಅಂಚೆ ಮೂಲಕ 3 ತಿಂಗಳಿಗೊಮ್ಮೆ ಪುಸ್ತಕ ಕಳುಹಿಸಲಾಗುತ್ತಿದೆ. ಪುಸ್ತಕದಲ್ಲಿ 1 ರಿಂದ 13 ಅಧ್ಯಾಯದ ವರೆಗೆ ಕನ್ನಡ ವರ್ಣಮಾಲೆ, ಪದಗಳುನ್ನು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪಠ್ಯ ವಿರುತ್ತದೆ. ಅವುಗಳನ್ನು ಹೇಗೆ ಬರೆಯುವುದು, ಒದುವ ರೀತಿ, ಉಚ್ಛರಣೆ ಹೇಗೆ ಎಂಬ ಇತ್ಯಾಬಿ ಮಾಹಿತಿಗಳನ್ನು ರೇಖಾಚಿತ್ರ ಹಾಗು ಹಿಂದಿ ಇಂಗ್ಲಿಷ್‌ನಲ್ಲಿ ವಿಶ್ಲೇಷಣೆ ಮಾಡಲಾಗಿರುತ್ತದೆ.

ಇದನ್ನು ಕಲಿತ ನಂತರ 13ರಿಂದ 50 ಅಧ್ಯಾಯದ ವರೆಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇದರ ಮುಂದುವರೆದ ಭಾಗವನ್ನು ಸ್ವತಃ ಕಲಿಯಬೇಕು. ಕಚೇರಿಗಳಲ್ಲಿ ಹೇಗೆ ಮಾತನಾಡಬೇಕು, ಹೊರಗೆ ಹೇಗೆ ವ್ಯವಹಾರಿಸಬೇಕು, ಎಂಬುದನ್ನು ಉದಾಹರಣ ಸಹಿತ ಸಂಭಾಷಣೆ ಇರುತ್ತದೆ. ನಂತರ ಆಡಳಿತ ಕನ್ನಡ ಪಠ್ಯವಿರ್ತುದೆ, ಆಡಳಿತದಲ್ಲಿ ಪತ್ರ ವ್ಯವಹಾರ, ಆಡಳಿತಕ್ಕೆ ಬೇಕಾಗಿರುವ ಕನ್ನಡವನ್ನು ಈ ಮಟ್ಟದಲ್ಲಿ ಕಲಿಸಲಾಗುತ್ತಿದೆ. ಇದು ಕನ್ನಡ ಬಾರದ ಸರಕಾರಿ ನೌಕರರಿಗೆ ಸಹಕಾರಿಯಾಗಿರುತ್ತದೆ.

ಇದರ ನಂತರ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಣ್ಣ ಕಥೆಗಳು ಒದುವುದು ಬರೆಯುದನ್ನು ಅಭ್ಯಾಸ ಮಾಡಿಸಲಾಗುತ್ತದೆ. ಈ ಅವಧಿಯಲ್ಲಿ 2ಬಾರಿ 3 ದಿನಗಳ ಸಂಪರ್ಕ ಶಿಬಿರ ಆಯೋಜಿಸಲಾಗುತ್ತದೆ. ಶಿಬಿರದಲ್ಲಿ ಅಂಚೆ ಮೂಲಕ ಕನ್ನಡ ಕಲಿಯುವ ಎಲ್ಲರೂ ಭಾಗವಹಿಸುತ್ತಾರೆ. ಸಂಪನ್ಮೂಲ ವ್ಯಕ್ತಿಗಳು ಅಭ್ಯರ್ಥಿಗಳಿಗೆ ಪಠ್ಯ ಪುಸ್ತಕದ ಹೊರತಾಗಿ ಮಾರ್ಗದರ್ಶನ ಮಾಡುತ್ತಾರೆ.

ಅಭ್ಯರ್ಥಿಗಳಿಗೆ ಕಲಿಕೆ ಸಮಯದಲ್ಲಿ ಉಂಟಾಗುವ ಸಂಶಯ ಅಧ್ಯಾಯ ಹಾಗೂ ಕಲಿಕೆಯ ಸಮಸ್ಯೆ ಪರಿಹರಿಸಲಾಗುತ್ತದೆ. ಇದರ ನಂತರ ವಾರ್ಷಿಕವಾಗಿ ಪರೀಕ್ಷೆ ನಡೆಸಲಾಗುತ್ತದೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ, ಅಭ್ಯರ್ಥಿಗಳಿಗೆ ಅಂಕ ಪಟ್ಟಿ, ಪ್ರಮಾಣ ಪತ್ರ ನೀಡಲಾಗುತ್ತದೆ…..