ಕರ್ಮದ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಮಾತು..!
ಕರ್ಮ,ದ್ವೇಷ ತೀರಿಸಿಕೊಳ್ಳುವ ಅಗತ್ಯವಿಲ್ಲ ಎಂದ ದರ್ಶನ್ ಪತ್ನಿ....
ಬೆಂಗಳೂರು:
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಆಗಾಗ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ವಿಜಯಲಕ್ಷ್ಮಿ ಅವರು ಕರ್ಮದ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ. ಅದೆನೆಂದರೆ, “ಕರ್ಮ, ದ್ವೇಷ ತೀರಿಸಿಕೊಳ್ಳುವ ಅಗತ್ಯವಿಲ್ಲ. ಸುಮ್ಮನೆ ಕುಳಿತು ಕಾಯುತ್ತಿರಿ. ನಿಮ್ಮನ್ನು ಯಾರು ನೋಯಿಸಿರುತ್ತಾರೋ, ಅವರು ತಮ್ಮನೇ ನೋಯಿಸಿಕೊಳ್ಳುತ್ತಾರೆ. ಒಂದು ವೇಳೆ ನೀವು ಅದೃಷ್ಟಶಾಲಿಗಳಾಗಿದ್ದರೆ, ಅದನ್ನು ನೋಡುವ ಅವಕಾಶವನ್ನು ದೇವರು ನಿಮಗೆ ಕೊಡುತ್ತಾನೆ” ಎನ್ನುವ ಸಾಲುಗಳಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ವಿಜಯಲಕ್ಷ್ಮಿ ಅವರು ‘Sunday quote’ ಎಂದು ಕ್ಯಾಪ್ಶನ್ ಕೊಟ್ಟು ಜೊತೆಗೆ ಚಪ್ಪಾಳೆ ಹೊಡೆಯುತ್ತಿರುವ ಮತ್ತು ನಗುವ ಎಮೋಜಿಯನ್ನು ಹಾಕಿದ್ದಾರೆ. ವಿಜಯಲಕ್ಷ್ಮಿ ಅವರು ಟ್ವೀಟ್ ಮಾಡಿದ ತಕ್ಷಣ, ವಿಜಯಲಕ್ಷ್ಮಿ ಮೇಡಂ ಈ ಮಾತನ್ನೂ ಯಾರಿಗೆ ಹೇಳಿದ್ದೀರ? ನಿಮಗೆ ನೋವಾಗಿದಿಯಾ? ನಿಮಗೆ ಬೇಸರ ಮಾಡಿದ್ದು ಯಾರು? ಹೀಗೆ ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನೂ ಕೆಲವರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜೊತೆಗೆ ತುಂಬಾ ಚೆನ್ನಾಗಿದೆ, ಕರ್ಮ ಎಲ್ಲರಿಗೂ ಪಾಠ ಕಲಿಸುತ್ತದೆ. ಸೂಪರಾಗಿದೆ ಮೇಡಂ, ಅತ್ತಿಗೆ ಖಡಕ್ ಪೋಸ್ಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲ ದರ್ಶನ್ ಅಭಿಮಾನಿಗಳಲ್ಲಿ ಮೇಡಂ ಅವರು ಯಾಕೆ? ಈ ರೀತಿ ಹೇಳಿದ್ದಾರೆ ಎಂಬ ಗೊಂದಲ ಮೂಡಿಸಿದೆ……