Breaking News

ಕಾಳಿ ನದಿ ತೀರದಲ್ಲಿ ವೈನ್​ ಉತ್ಸವ..!

ಸಿಪ್​ ಹೊಡೆದು ಫುಲ್ ಎಂಜಾಯ್.....

wine festival
SHARE......LIKE......COMMENT......

ಕಾರವಾರ:

ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ದ್ರಾಕ್ಷಿರಸ ಮಂಡಳಿ ಜಂಟಿಯಾಗಿ ಕಾರವಾರದಲ್ಲಿ ಕಳೆದ ವರ್ಷದಿಂದ ರಾಜ್ಯಮಟ್ಟದ ವೈನ್ ಉತ್ಸವವನ್ನ ಹಮ್ಮಿಕೊಳ್ತಿದೆ. ಈ ಬಾರಿಯೂ ಕಾಳಿ ನದಿ ಗಾರ್ಡನ್ ಆವರಣದಲ್ಲಿ ವೈನ್ಸ್​​ ಉತ್ಸವ ಭರ್ಜರಿಯಾಗೇ ನಡೀತಿದೆ. ಮೊದಲ ದಿನದ ವೈನ್ ಮೇಳಕ್ಕೆ ತೋಟಗಾರಿಕಾ ಸಚಿವ ಎಂ ಸಿ ಮನಗೂಳಿ ಚಾಲನೆ ನೀಡಿದ್ರು.

ವೈನ್ ಉತ್ಸವದಲ್ಲಿ ರಾಜ್ಯದ ವಿವಿಧ ಕಂಪನಿಯವ್ರು ತಾವು ತಯಾರಿಸಿದ ವೈನ್ ಪ್ರಾಡಕ್ಟ್ಅನ್ನು ತಂದು ಉತ್ಸವದಲ್ಲಿ ಮಾರಾಟ ಮಾಡ್ತಿದ್ದಾರೆ. ಈ ಬಾರಿಯ ವೈನ್ ಮೇಳದಲ್ಲಿ ದೇಶವಿದೇಶದ ವೈರೈಟಿ ವೈರೈಟಿ ವೈನ್​​ಗಳು ಸೇರ್ಪಡೆಯಾಗಿವೆ. ವೈನ್​​ ಪ್ರಿಯರು ಉತ್ಸವವನ್ನು ಫುಲ್ ಎಂಜಾಯ್ ಮಾಡ್ತಿದ್ದಾರೆ..