ಬೆಂಗಳೂರು:
ರಸ್ತೆ ಗುಂಡಿಗಳನ್ನ ಮುಚ್ಚುವಂತೆ ಹೈಕೋರ್ಟ್ BBMPಗೆ ಚಾಟಿ ಬೀಸಿತ್ತು. ಬಿಬಿಎಂಪಿ ಕೋರ್ಟ್ ಸೂಚನೆಯಂತೆ ನಗರದ ಎಂಟು ವಲಯಗಳಲ್ಲಿರೋ ರಸ್ತೆ ಗುಂಡಿ ಮುಚ್ಚಲು ಮುಂದಾಗಿದ್ರು. ದಸರಾ ರಜೆಗೂ ಮುನ್ನ ಉಳಿದಿರೋ ರಸ್ತೆ ಗುಂಡಿಗಳನ್ನ ಮುಚ್ಚುವಂತೆ ಸೂಚಿಸಿತ್ತು. ಆದ್ರೆ ಬಹುತೇಕ ಗುಂಡಿಗಳನ್ನು ಇನ್ನೂ ಮುಚ್ಚೇ ಇಲ್ಲ. ಹೈಕೋರ್ಟ್ ಆದೇಶಕ್ಕೂ ಕೆಲವು ಕಡೆ ಬೆಲೆ ಸಿಕ್ಕಿಲ್ಲ. ಇದೀಗ ಇಂದು ಈ ಬಗ್ಗೆ ಕೋರ್ಟ್ ಎಷ್ಟು ರಸ್ತೆ ಗುಂಡಿ ಮುಚ್ಚಿದ್ದಾರೆನ್ನೋ ಬಗ್ಗೆ ವಿವರ ಪಡೆಯಲಿದೆ.
ಮೇಯರ್ ಗಂಗಾಂಬಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಗುಂಡಿಯ ವಿವರ ಪಡೆದಿದ್ದು.. ಎಂಟು ವಲಯಗಳಿಂದ ಹಳೆಯ ರಸ್ತೆ ಗುಂಡಿಗಳು ಹಾಗೂ ಹೊಸದಾಗಿ ಪತ್ತೆ ಹಚ್ಚಲಾಗಿದ್ದ 686 ಗುಂಡಿಗಳನ್ನ ಮುಚ್ಚಿರೋದಾಗಿ ಮೇಯರ್‌ಗೆ ವರದಿ ನೀಡಿದ್ದಾರೆ……