Breaking News

ಕೊಹ್ಲಿ ಆಧುನಿಕ ಕ್ರಿಕೆಟ್ ನ ಶ್ರೇಷ್ಠ ಕ್ರಿಕೆಟಿಗ..!

ಫೀಲ್ಡಿಂಗ್ ಮಾಂತ್ರಿಕ ಜಾಂಟಿ ರೋಡ್ಸ್ ಹೇಳಿಕೆ....

SHARE......LIKE......COMMENT......

ನವದೆಹಲಿ:
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ನ ಶ್ರೇಷ್ಠ ಕ್ರಿಕೆಟ್ ಆಟಗಾರ ಎಂದು ದಕ್ಷಿಣ ಆಫ್ರಿಕಾ ತಂಡದ ಫೀಲ್ಡಿಂಗ್ ದಂತಕಥೆ ಜಾಂಟಿ ರೋಡ್ಸ್ ಹೇಳಿದ್ದಾರೆ.

ಸ್ಪೋರ್ಟ್ಸ್ ಸ್ಟಾರ್ ಲೈವ್ ಎಂಬ ಕ್ರೀಡಾ ವಾಹಿನಿಯೊಂದಿಗೆ ಮಾತನಾಡಿ ಜಾಂಟಿ ರೋಡ್ಸ್, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಆಟವನ್ನು ತುಂಬು ಹೃದಯದಿಂದ ಶ್ಲಾಘಿಸಿದರು.

ಕೊಹ್ಲಿ ಆಟ ನಿಜಕ್ಕೂ ಶ್ಲಾಘನೆಗೆ ಅರ್ಹವಾದದ್ದು. ಕೊಹ್ಲಿ ಆಧುನಿಕ ಕ್ರಿಕೆಟ್ ನ ಸರ್ವ ಶ್ರೇಷ್ಠ ಆಟಗಾರರಾಗಿದ್ದಾರೆ. ಅವರ ಬದ್ಧತೆ, ಆಟದಲ್ಲಿನ ಸ್ಥಿರತೆ, ಪರಿಸ್ಥಿತಿಗೆ ಸಂಬಂಧಿಸಿದಂತೆ ರೂಪಾಂತರವಾಗುವ ಗುಣ ಅದ್ಬುತವಾದದ್ದು. ಇಂತಹ ಗುಣಗಳು ಎಲ್ಲರಿಗೂ ಸಿದ್ಧಿಸುವುದಿಲ್ಲ. ಈ ವಿಚಾರದಲ್ಲಿ ಕೊಹ್ಲಿ ಆಧುನಿಕ ಕ್ರಿಕೆಟ್ ನ ಸರ್ವಶ್ಱೇಷ್ಠ ಆಟಗಾರ ಎಂದು ರೋಡ್ಸ್ ಹೇಳಿದ್ದಾರೆ.

ಕಳೆದ ಭಾನುವಾರ ಗುವಾಹತಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಮತ್ತೆ ಇಂದು ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈಗಾಗಲೇ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ 1 ಶತಕ ಸಿಡಿಸಿರುವ ಕೊಹ್ಲಿ ಸಚಿನ್ ದಾಖಲೆಯನ್ನೂ ಮುರಿಯುವ ವಿಶ್ವಾಸ ಮೂಡಿಸಿದ್ದಾರೆ…..