ಲೈಫ್ ಸ್ಟೈಲ್:
ಅನೇಕ ಹೊಸ ಫೀಚರ್ಗಳನ್ನು ಪರಿಚಯಿಸಿದ್ದ ವಾಟ್ಸ್ಆ್ಯಪ್ ವರ್ಷಾಂತ್ಯದಲ್ಲೂ ಬಳಕೆದಾರರಿಗೆ ಹೊಸ ಅಪ್ಡೇಟ್ಗಳನ್ನು ನೀಡುತ್ತಿದೆ. ಪ್ರಮುಖವಾಗಿ ವಾಟ್ಸ್ಆ್ಯಪ್ ಇದೀಗ ಮೂರು ಹೊಸ ಫೀಚರ್ಗಳನ್ನು ಬಳಕೆದಾರರ ಮುಂದಿಟ್ಟಿದೆ. ಈ ನೂತನ ಅಪ್ಡೇಟ್ಗಳ ಮೂಲಕ ವಾಟ್ಸ್ಆ್ಯಪ್ ಬಳಕೆದಾರರ ಚಾಟಿಂಗ್-ಟಾಕಿಂಗ್ ಅನುಭವ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ಫೇಸ್ಬುಕ್ ಇಂಕ್ ಕಂಪೆನಿ ಹೇಳಿದೆ. ವಾಟ್ಸ್ಆ್ಯಪ್ ಪರಿಚಯಿಸಿರುವ ನೂತನ ಫೀಚರ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಕಾಲ್ ವೈಟಿಂಗ್ ಆಯ್ಕೆ. ಹೌದು, ಇನ್ಮುಂದೆ ನೀವು ವಾಟ್ಸ್ಆ್ಯಪ್ ಕರೆಯಲ್ಲಿ ನಿರತರಾಗಿದ್ದರೆ, ಮತ್ತೊಂದು ಕರೆಯನ್ನು ವೈಟಿಂಗ್ನಲ್ಲಿ ಕಾಣಿಸಿಕೊಳ್ಳಲಿದೆ.
ಇದಲ್ಲದೆ ವಾಟ್ಸ್ಆ್ಯಪ್ ರಿಮೈಂಡರ್ ಫೀಚರ್ (WhatsApp Reminder Feature) ಕೂಡ ಲಭ್ಯವಿರಲಿದೆ. ಈ ಫೀಚರ್ ಸಹಾಯದಿಂದ ಬಳಕೆದಾರರು ತಮ್ಮ ಕಾರ್ಯಗಳ ಯೋಜನೆ ಮತ್ತು ದಿನಾಂಕಗಳನ್ನು ನೆನಪಿಟ್ಟುಕೊಳ್ಳುವಂತೆ ಮಾಡಬಹುದು.ಇದಕ್ಕಾಗಿ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಅಕೌಂಟ್ನ್ನು ನೀವು Any.do ಜೊತೆ ಲಿಂಕ್ ಮಾಡಬೇಕಾಗಿದೆ. ಆ ಬಳಿಕ ರಿಮೈಂಡರ್ ಸೇವೆಯನ್ನು ಬಳಕೆದಾರರು ಪಡೆದುಕೊಳ್ಳಬಹುದು.ಹಾಗೆಯೇ ಈ ಹಿಂದೆ ತಿಳಿಸಿದ್ದ ವಾಟ್ಸ್ಆ್ಯಪ್ ಗೌಪ್ಯತೆ ಸೆಟ್ಟಿಂಗ್ ಅನ್ನು ಎಲ್ಲಾ ಮೊಬೈಲ್ಗಳಲ್ಲೂ ನೀಡಿದೆ. ಇದರಿಂದ ಇನ್ನು ಮುಂದೆ ವಾಟ್ಸ್ಆ್ಯಪ್ನಲ್ಲಿ ಬೇರೆ ಗುಂಪಿಗೆ ಸೇರುವ ಮುನ್ನ ಬಳಕೆದಾರರ ಅನುಮತಿ ಕೇಳುವುದನ್ನು ಕಡ್ಡಾಯಗೊಳಿಸಿದೆ…..