ಉಡುಪಿ:
ಪಡುಬಿದ್ರಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಪ್ರಾಯೋಗಿಕ ಘನತ್ಯಾಜ್ಯ ನಿರ್ವಹಣಾ ಘಟಕ ನವೆಂಬರ್ ತಿಂಗಳಾಂತ್ಯಕ್ಕೆ ಕಾರ್ಯಾರಂಭಿಸಲಿದೆ.
ಸುಮಾರು 500 ಚದರ ಅಡಿ ವಿಸ್ತೀರ್ಣದಲ್ಲಿ ಕೆಆರ್ಐಡಿಎಲ್ ಸಂಸ್ಥೆ ಮೂಲಕ ಘಟಕ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಗ್ರಾಮ ವಿಕಾಸ ಯೋಜನೆಯಡಿ 10 ಲಕ್ಷ ರೂಪಾಯಿ ಠೇವಣಿ ಇರಿಸಲಾಗಿದೆ. ಘಟಕ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಘಟಕದ ನಿರ್ವಹಣೆ ಹಾಗೂ ಕಸ ಸಂಗ್ರಹದ ಕುರಿತು ನವೆಂಬರ್ 10ರಂದು ನಡೆಯುವ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಂತಿಮವಾಗಲಿದೆ.
ಪ್ರಾಯೋಗಿಕವಾಗಿ ಈ ಘಟಕದಲ್ಲಿ ಪೇಟೆಯ ಅಂಗಡಿ ಮಳಿಗೆಗಳು ಸೇರಿದಂತೆ ಆಸುಪಾಸಿನ ಸುಮಾರು 700 ಮನೆಗಳಿಂದ ಒಣ ಕಸ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಪ್ರಥಮ ಹಂತದಲ್ಲಿ ದಿನಂಪ್ರತಿ ಸುಮಾರು ಎರಡು ಕ್ವಿಂಟಾಲ್ ಒಣ ಕಸ ಸಂಗ್ರಹದ ನಿರೀಕ್ಷೆಯಿದೆ. ಘಟಕ ನಿರ್ವಹಣೆಗಾಗಿ ಪಡುಬಿದ್ರಿಯ ಉದ್ಯಮಿಯೊಬ್ಬರು ಮುಂದೆ ಬಂದಿದ್ದು, ಈ ಬಗ್ಗೆ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ.
ಪ್ರತಿ ಮನೆಗಳಿಗೆ ಕಸ ಸಂಗ್ರಹಕ್ಕಾಗಿ 100 ರೂ,ಅಂಗಡಿ ಮಳಿಗೆಗಳಿಗೆ 300 ರೂ, ಹಾಗೂ ಹೋಟೆಲ್ಗಳಿಗೆ 1000-1500 ರೂ. ಶುಲ್ಕ ವಿಧಿಸಲಾಗುತ್ತದೆ. ಮೂಲದಲ್ಲಿಯೇ ಕಸ ವಿಂಗಡಿಸಲು ಬಕೆಟ್ ಅಥವಾ ಗೋಣಿ ಚೀಲಗಳನ್ನು ನೀಡಬೇಕೆ ಎಂಬುದರ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಯಾವುದೇ ಕಾರಣಕ್ಕೂ ಹಸಿ ಕಸಗಳನ್ನು ಸಂಗ್ರಹ ಮಾಡಲಾಗುವುದಿಲ್ಲ. ಮಾರುಕಟ್ಟೆ ಸಹಿತ ಇನ್ನಿತರ ಕಡೆಯ ಹಸಿ ಕಸಗಳನ್ನು ಸಂಗ್ರಹಿಸಲು ಹೆಜಮಾಡಿಯ ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ……