Breaking News

ಚರಂಡಿಗೆ ಅಗೆದ ಗುಂಡಿ ಮುಚ್ಚೋರ‌್ಯಾರು..!

ಗುತ್ತಿಗೆದಾರರ ವಿರುದ್ದ ಜನರ ಅಕ್ರೋಶ....

SHARE......LIKE......COMMENT......
ದಾವಣಗೆರೆ:

ವರ್ಷದ ಹಿಂದೆ ಚರಂಡಿ ನಿರ್ಮಿಸಲು ಅಗೆದಿದ್ದ ಆಳೆತ್ತರದ ಗುಂಡಿಯಿಂದ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಚರಂಡಿ ಇಲ್ಲದ ಮರೇನಹಳ್ಳಿ ರಸ್ತೆಯ ಜೆ.ಡಿ. ಲೇಔಟ್ ಬಡಾವಣೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಿರುತ್ತದೆ.ರಸ್ತೆ, ಮನೆಗಳಿಗೆ ನುಗ್ಗಿದ ನೀರು ವಾರವಾದರೂ ಹೋಗುವುದಿಲ್ಲ. ಕೆಲವರು ಮಳೆಗಾಲ ಮುಗಿಯುವ ತನಕ ತಮ್ಮ ಮನೆ ಬಿಟ್ಟು ಸಂಬಂಧಿ ಮನೆಯಲ್ಲಿ ಜೀವಿಸುವ ಪರಿಸ್ಥಿತಿ ಇದೆ.

ಪಟ್ಟಣ ಪಂಚಾಯಿತಿ 2017-18ನೇ ಸಾಲಿನಲ್ಲಿ ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರಿಂದ ಚರಂಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಿಸಿ ಆರಂಭದಲ್ಲಿ 10 ಅಡಿ ಗುಂಡಿ ತೋಡಿಸಿದ ಗುತ್ತಿಗೆದಾರರು ವರ್ಷವಾದರೂ ಪತ್ತೆಯಾಗಿಲ್ಲ. ಈ ಬಗ್ಗೆ ಪಪಂ ಅಧಿಕಾರಿಗಳು ಮತ್ತು ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಎಮ್ಮೆಯೊಂದು ಗುಂಡಿಯಲ್ಲಿ ಬಿದ್ದು ಮೇಲೆತ್ತಲು ಹರಸಾಹಸ ಪಡಬೇಕಾಯಿತು. ಮನುಷ್ಯರು ಬಿದ್ದರೆ ಸಾವು ಖಚಿತ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡರು…..