ಮಂಡ್ಯ:
ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಅವರನ್ನು ಇಂದು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಹತ್ಯೆಯ ಆರೋಪಿಗಳನ್ನು “ಶೂಟೌಟ್ ಮಾಡಿ, ತೊಂದರೆ ಇಲ್ಲ” ಎಂದು ಪೋಲೀಸರಿಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದದ್ದು ಈಗ ಮಾದ್ಯಮಗಳಲ್ಲಿ ಭಾರೀ ಸದ್ದು ಮಾಡಿದೆ.
ಮಾದ್ಯಮದಲ್ಲಿ ತನ್ನ ಹೇಳಿಕೆ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿಗಳು ತಕ್ಷಣ ತಮ್ಮ ಹೇಳಿಕೆ ಕುರಿತು ಸ್ಪಷ್ಟೀಕರಣ ಕೊಟ್ಟಿದ್ದಾರೆ.”ಮದ್ದೂರಿನಲ್ಲಿ ಇಂದು ಹಾಡುಹಗಲೇ ಒಬ್ಬ ಒಳ್ಳೆ ವ್ಯಕ್ತಿಯ ಕೊಲೆ ನಡೆದಿದೆ. ಕೊಲೆಯಾದ ಪ್ರಕಾಶ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದವರು.ಹೀಗಾಗಿ ಇಂತಹಾ ಘಟನೆ ಮರುಕಳಿಸಬಾರದು ಎಂದು ಪೋಲೀಸರಿಗೆ ಹೇಳುವ ಭರದಲ್ಲಿ ಭಾವಾವೇಶದಿಂದ ನಾನು ಶೂಟೌಟ್ ಮಾಡುವುದಕ್ಕೆ ಹೇಳಿದ್ದೆ.. ಇದು ನನ್ನ ಆ ಕ್ಷಣದ ಭಾವನೆಯಾಗಿತ್ತೇ ಹೊರತು ಆದೇಶವಾಗಿಲ್ಲ” ಎಂದು ಸ್ಪಷ್ಟೀಕರಣ ಕೊಟ್ಟರೂ…..