ಸಿನಿಮಾ:
ಮಾದಕ ನಟಿ ಸನ್ನಿ ಲಿಯೋನ್ ಝೂಟ ಕಹೀ ಕ ಸಿನಿಮಾದಲ್ಲಿ ಮತ್ಸ್ಯಕನ್ಯೆಯಾಗಿ ಕಂಗೊಳಿಸಿದ್ದಾರೆ. ಅಕ್ಷ ರಶಃ ಮತ್ಸ್ಯರಾಣಿಯಾಗಿ ಕಾಣುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಸ್ಪೆಷಲ್ ಸಾಂಗ್‌ಗೆ ಮಚ್ಲಿ ಜಲ್ ಕಿ ರಾನಿ ಹೈ ಎಂಬ ನರ್ಸರಿ ಶಾಲೆಯ ಜನಪ್ರಿಯ ರೈಮ್ ಅನ್ನು ಬಳಸಿಕೊಳ್ಳಲಾಗಿದೆ. ಖ್ಯಾತ ರ‍್ಯಾಪರ್ ಹನಿ ಸಿಂಗ್ ಇದನ್ನು ಹಾಡಿದ್ದಾರೆ. ಈ ಸಿನಿಮಾದ ಸ್ಪೆಷಲ್ ಸಾಂಗ್‌ವೊಂದರಲ್ಲಿ ಮತ್ಸ್ಯಕನ್ಯೆಯಾಗಿ ಕಾಣಿಸಿಕೊಳ್ಳಲಿರುವ ಅವರಿಗಾಗಿ ಮೀನಿನಂತೆ ಕಾಣುವ ವಿಶೇಷ ಕಾಸ್ಟ್ಯೂಮ್ ಕೂಡಾ ವಿನ್ಯಾಸಗೊಳಿಸಲಾಗಿದೆ. ಈ ಸಿನಿಮಾ ಫೆಬ್ರವರಿಗೆ ಬಿಡುಗಡೆಯಾಗಲಿದೆ.