ಚೆನ್ನೈ:
ಫೇಸ್ ಬುಕ್ ಗೆಳೆಯನೊಂದಿಗೆ ಓಡಿಹೋಗುವುದನ್ನು ತಡೆದ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ದಾರುಣ ಘಟನೆ ಸೋಮವಾರ ತಿರುವಳ್ಳೂರಿನಲ್ಲಿ ನಡೆದಿದೆ.ಆಂಜನೇಯಪುರಂ ನಿವಾಸಿ, 19 ವರ್ಷದ ದೇವಿ ಪ್ರಿಯಾಗೆ ಆರು ತಿಂಗಳ ಹಿಂದಷ್ಟೇ ಫೇಸ್ ಬುಕ್ ನಲ್ಲಿ ವಿವೇಕ್ ಎಂಬ ಯುವಕ ಗೆಳೆಯನಾಗಿದ್ದ. ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇದನ್ನು ಗಮನಿಸಿದ ದೇವಿ ಪ್ರಿಯಾ ಪೋಷಕರು ಮಗಳು ಮನೆಯಿಂದ ಹೋಗದಂತೆ ಮತ್ತು ಮೊಬೈಲ್ ಬಳಸದಂತೆ ನಿರ್ಬಂಧ ಹಾಕಿದ್ದರು ಈ ವಿಚಾರವನ್ನು ವಿವೇಕ್ ಗೆ ತಿಳಿಸಿದ ದೇವಿ ಪ್ರಿಯಾ, ಇಬ್ಬರು ಸೇರಿ ಓಡಿ ಹೋಗುವ ನಿರ್ಧಾರಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೇವಿ ಪ್ರಿಯಾ, ತಾನು ಪ್ರಿಯಕರನೊಂದಿಗೆ ಓಡಿ ಹೋಗುವುದನ್ನು ತಡೆದ ತಾಯಿಯನ್ನು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರು ದೇವಿ ಪ್ರಿಯಾ, ವಿವೇಕ್, ವಿಗ್ನೇಶ್ ಮತ್ತು ಸತೀಶ್ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ……..