Breaking News

ತಾಯಿ-ಮಗಳ ಸಂಘರ್ಷದಲ್ಲಿ ಯುವತಿಯರ ಆತ್ಮಹತ್ಯೆ ಹೆಚ್ಚು..!

SHARE......LIKE......COMMENT......

ನ್ಯೂಯಾರ್ಕ್ :

ಬಾಲ್ಯದಲ್ಲಿ ಹಿಂಸೆ ಅನುಭವಿಸಿದ್ದ ಯುವತಿಯರು ತಮ್ಮ ವಯಸ್ಸಿನಲ್ಲಿ  ತಾಯಿ ಜೊತೆಗೆ ಉತ್ತಮ ಸಂಬಂಧ ವಿಲ್ಲದೆ ಸಂಘರ್ಷ ಎದುರಿಸುತ್ತಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚಿನ ಚಿಂತನೆ ನಡೆಸುತ್ತಾರೆ.

ತಾಯಿ- ಮಗಳ ಸಂಬಂಧ ಸರಿ ಇಲ್ಲದಿದ್ದರೆ ಹಾಗೂ ಬಾಲ್ಯದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದರೆ ಅಂತಹವರು ಹದಿಹರೆಯಕ್ಕೆ ಬಂದಾಗ ಆತ್ಮಹತ್ಯೆಗೆ  ಯೋಚಿಸುತ್ತಾರೆ ಎಂಬುದು ತಮ್ಮ ಸಂಶೋಧನೆಯಿಂದ ತಿಳಿದುಬಂದಿದೆ ಯುವತಿಯರು ಹೆಚ್ಚಿನ ಸಮಯವನ್ನು ತಮ್ಮ ಸ್ನೇಹಿತರೊಂದಿಗೆ ಹಾಗೂ  ಕುಟುಂಬದ ಜೊತೆಯಲ್ಲಿ ಕಡಿಮೆ ಸಮಯ ಕಳೆಯುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ .ತಾಯಿ- ಮಗಳ ಗುಣಮಟ್ಟದ ಸಂಬಂಧ, ತಾಯಿ- ಮಗಳ ಸಂಘರ್ಷ, ಹಾಗೂ  ಹದಿಹರೆಯದ ಯುವತಿಯರ ಖಿನ್ನತೆಗೆ ಕಾರಣಗಳನ್ನು ಪರಿಕ್ಷೀಸಿದ್ದು, ಬಾಲ್ಯದಲ್ಲಿ ನಿಂದನೆಗೆ ಗುರಿಯಾಗಿದ್ದ ಶೇ. 51.8 ರಷ್ಟು ಯುವತಿಯರು  ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ಸಾಯಬೇಕು ಎಂದು ಯೋಚಿಸುವುದು ಕಂಡುಬಂದರೆ, ಬಾಲ್ಯದಲ್ಲಿ ನಿಂದನೆಗೆ ಗುರಿಯಾಗದ ಶೇ, 11.7 ರಷ್ಟು ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಯೋಚನೆ ಮಾಡಿರುವುದು ಕಂಡುಬಂದಿದೆ….

ಹದಿಹರೆಯದ ವಯಸ್ಸಿನಲ್ಲಿ ತಾಯಿ ಜೊತೆಗೆ ಉತ್ತಮ ಸಂಬಂಧ ಇರದಿದ್ದಾಗ ಆತ್ಮಹತ್ಯೆಯಂತಹ ಚಿಂತನೆಗಳು ಹುಟ್ಟಿಕೊಳ್ಳುತ್ತವೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ……