ನವದೆಹಲಿ:
ಭಾರತದ ಗಡಿಯತ್ತ ಬರುತ್ತಿದ್ದ ಪಾಕಿಸ್ತಾನದ ಜೆಟ್ ವಿಮಾನವನ್ನು ಬೆನ್ನಟ್ಟಿ ಹೋಗಿ ಪಾಕ್ ಸೇನೆಯ ವಶವಾಗಿದ್ದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಶುಕ್ರವಾರ ರಾತ್ರಿ 9.15ರ ಸುಮಾರಿಗೆ ಅಟಾರಿ-ವಾಘಾ ಗಡಿ ಭಾರತಕ್ಕೆ ಆಗಮಿಸಿದರು. ಪಾಕಿಸ್ತಾನ ಸೇನೆಯ ಅಧಿಕಾರಿಗಳು ಅಭಿನಂದನ್ ಅವರನ್ನು ಭಾರತದ ಸೇನೆಯ ಅಧಿಕಾರಿಗಳಿಗೆ ಒಪ್ಪಿಸಿದರು.
ಪಾಕಿಸ್ತಾನದ ಲಾಹೋರ್ನಿಂದ ರಸ್ತೆ ಮಾರ್ಗವಾಗಿ ಬೆಂಗಾವಲು ಪಡೆಯ ವಾಹನಗಳೊಂದಿಗೆ ಪಾಕ್ ಸೇನೆ ಅಭಿನಂದನ್ ಅವರನ್ನು ಕರೆತಂದಿತು. ಬಳಿಕ ಹಸ್ತಾಂತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಬೀಳ್ಕೊಟ್ಟರು. ಈ ವೇಳೆ ಧೀರ ಪೈಲಟ್ ಅಭಿನಂದನ್ರನ್ನು ವಾಯುಪಡೆಯ ಅಧಿಕಾರಿಗಳು ಸಂತಸದಿಂದ ಬರಮಾಡಿಕೊಂಡರು. ಗಡಿಯಲ್ಲಿ ನೆರೆದಿದ್ದ ದೇಶದ ನಾಗರಿಕರು ಜೈಕಾರ ಕೂಗುವ ಮೂಲಕ ಅಭಿನಂದನ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು……