Breaking News

ದಕ್ಷಿಣ ಭಾರತಕ್ಕೆ ಫನಿ ಚಂಡಮಾರುತದ ಶಾಕ್​​​..!

ಮೂರು ರಾಜ್ಯಗಳಲ್ಲಿ ಹೈ ಅಲರ್ಟ್....

SHARE......LIKE......COMMENT......

ಬೆಂಗಳೂರು:

ಫನಿ ಸೈಕ್ಲೋನ್​​​ ಬಂಗಾಳಕೊಲ್ಲಿಯಿಂದ ಒಡಿಶಾ ಕರಾವಳಿಯತ್ತ ನುಗ್ಗುತ್ತಿದ್ದು ನಾಳೆ ಸಂಜೆ ವೇಳೆಗೆ ಅಪ್ಪಳಿಸಲಿದೆ. ಗಂಟೆಗೆ 200 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫನಿ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದ ಕರಾವಳಿಯಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಇನ್ನು ಗಂಟೆಗೆ 175-185 ಕಿ.ಮೀ. ವೇಗದಲ್ಲಿ ಗಾಳಿ ಬೀಸ್ತಿದ್ದು, ತಮಿಳುನಾಡು ಮತ್ತು ಆಂದ್ರಪ್ರದೇಶದ ಕರಾವಳಿ ಭಾಗದಲ್ಲಿ ಈಗಾಗಲೇ ಭಾರೀ ಮಳೆ ಆಗ್ತಿದೆ. ಇನ್ನು ವಿಶಾಖಪಟ್ಟಣ ಮತ್ತು ಚೆನ್ನೈನಲ್ಲಿರುವ ನೌಕಾಪಡೆ ನೌಕೆಗಳನ್ನು ಸನ್ನದ್ಧವಾಗಿಡಲಾಗಿದೆ. ರಕ್ಷಣಾ ಪರಿಕರಗಳು, ಔಷಧ ಮತ್ತಿತರೆ ಪರಿಹಾರ ವಸ್ತುಗಳನ್ನು ಈ ನೌಕೆಗಳಲ್ಲಿ ದಾಸ್ತಾನು ಮಾಡಲಾಗಿದೆ….