Breaking News

ದಿನಗೂಲಿ ಕಾರ್ವಿುಕರ ಪ್ರತಿಭಟನೆ..!

ವೇತನ ವಿಳಂಬ, ಕೆಲಸದಿಂದ ವಜಾ ಖಂಡಿಸಿ ಹೋರಾಟ.....

SHARE......LIKE......COMMENT......

ರೋಣ:
ವೇತನ ವಿಳಂಬ, ಕೆಲಸದಿಂದ ವಜಾ ಮಾಡಿದ ಕ್ರಮ ಖಂಡಿಸಿ ಪುರಸಭೆ ದಿನಗೂಲಿ ಪೌರ ಕಾರ್ವಿುಕರು ಪುರಸಭೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ವೇತನ ಕುರಿತು ಪುರಸಭೆ ಅಧಿಕಾರಿಗಳಿಗೆ ಕೇಳಿದರೆ, ಇಂದು, ನಾಳೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈಗ ದಿಢೀರ್ ನೀವು ಕೆಲಸಕ್ಕೆ ಬರಬಾರದೆಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರ ಕಾರ್ವಿುಕ ಬಸಪ್ಪ ಚಲವಾದಿ ಮಾತನಾಡಿ, ವೇತನ ನೀಡದಿರುವುದರಿಂದ ಬಡ ಕಾರ್ವಿುಕರು ನಿತ್ಯ ಬದುಕಿಗಾಗಿ ಪರದಾಡುತ್ತಿದ್ದಾರೆ. ಕೆಲಸದಿಂದ ತೆಗೆದಿರುವುದಾಗಿ ಹೇಳುತ್ತಿದ್ದು, ನಮಗೆ ದಿಕ್ಕೇ ತೋಚದಂತಾಗಿದೆ ಎಂದರು.

ಮಲ್ಲಪ್ಪ ಮುದೇನಗುಡಿ, ಮಂಜುನಾಥ ಹೊಸಮನಿ, ಮೇಘರಾಜ ನಿಂಬಣ್ಣವರ, ರವಿ ಜೋಗಣ್ಣವರ, ಹನುಮಂತಪ್ಪ ತೆಗ್ಗಿನಮನಿ, ಗಂಗವ್ವ ಹಲಗಿ, ಮಂಜವ್ವ ಪೂಜಾರ, ಜಯವ್ವ ಹಾದಿಮನಿ, ಬಸವ್ವ ಪೂಜಾರ, ಇತರರಿದ್ದರು.

ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಪ್ರತಿಭಟನಾನಿರತರನ್ನು ಮನವೊಲಿಸಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ನ್ಯಾಯ ಒದಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು…….