ಗೋಕರ್ಣ:
ಭಾರತದ ಹಲವು ದೇವಾಲಯಗಳಲ್ಲಿ ಈಗಾಗಲೇ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು ಶಾರ್ಟ್ಸ್ ರೀತಿಯ ವಸ್ತ್ರಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಈ ಸಾಲಿಗೆ ಈಗ ಗೋಕರ್ಣದ ಮಹಾಬಲೇಶ್ವರ ದೇವಾಲಯವೂ ಕೂಡ.
ಇದೇ ಮೊದಲ ಬಾರಿಗೆ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ಬರಲಿದ್ದು, ವಸ್ತ್ರ ಸಂಹಿತೆ ಪಾಲನೆ ಮಾಡದವರಿಗೆ ದೇವಾಲಯ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಐತಿಹಾಸಿಕ ದೇವಾಲಯ ಈಗ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟಿದ್ದು, ಈವರೆಗೂ ಯಾವುದೇ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿರಲಿಲ್ಲ.
ವಸ್ತ್ರ ಸಂಹಿತೆ ಜಾರಿಗೆ ತರುತ್ತಿರುವುದರ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ ಹಾಲಪ್ಪ ತಿಳಿಸಿದ್ದಾರೆ , ಈ ವರೆಗೂ ಭಕ್ತಾದಿಗಳು ಪಂಚೆ, ಸೀರೆ ಧರಿಸಿ ದೇವಾಲಯಕ್ಕೆ ಬರುತ್ತಿದ್ದರು.ಇತ್ತೀಚಿನ ದಿನಗಳಲ್ಲಿ ಶಾರ್ಟ್ಸ್ ಧರಿಸಿ ಬರಲು ಪ್ರಾರಂಭಿಸಿದ್ದಾರೆ. ಆದ್ದರಿಂದ ವಸ್ತ್ರಸಂಹಿತೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ……