Breaking News

ದೋಸ್ತಿ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಗರಂ..!

ಹುಣಸೂರು ಮಾತ್ರವಲ್ಲಾ ಪಿರಿಯಾಪಟ್ಟಣದಲ್ಲೂ ಹನುಮ ಜಯಂತಿ ಆಚರಣೆ......

SHARE......LIKE......COMMENT......

ಮೈಸೂರು:

ಹನುಮ ಜಯಂತಿ ವಿಚಾರವಾಗಿ ದೋಸ್ತಿ ಸರ್ಕಾರದ ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ. ಹನುಮ ಜಯಂತಿ ಈ ಬಾರಿ ಹುಣಸೂರಿನಲ್ಲಿ ಮಾತ್ರವಲ್ಲ, ಪಿರಿಯಾಪಟ್ಟಣದಲ್ಲೂ ಆಚರಣೆ ಮಾಡಲಾಗುತ್ತೆ ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿ ಮಾತ್ನಾಡಿದ ಸಿಂಹ, ಡಿ.22ಕ್ಕೆ ಹುಣಸೂರಿನಲ್ಲಿ, ಡಿಸೆಂಬರ್​ 8ಕ್ಕೆ ಪಿರಿಯಾಪಟ್ಟಣದಲ್ಲಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಕಳೆದ ಬಾರಿ ಹನುಮ ಜಯಂತಿ ವೇಳೆ ಘರ್ಷಣೆ ನಡೆದಿತ್ತು. ಪೊಲೀಸ್ ಅಧಿಕಾರಿಯೊಬ್ಬರ ಅಹಂನಿಂದಾಗಿ ಗೊಂದಲ ಸೃಷ್ಟಿಯಾಗಿತ್ತು ಅಂತ ಅಸಮಾಧಾನಗೊಂಡ್ರು…….