ಸಿನಿಮಾ:
ನಟಸಾರ್ವಭೌಮ ಟ್ರೇಲರ್ READY TO FIRE…ಯೆಸ್ ಪವರ್ ಸ್ಟಾರ್ ಪುನೀತ್ ಪವರ್ ಪ್ಯಾಕ್ ಸಿನಿಮಾ ನಟಸಾರ್ವಭೌಮ ಟ್ರೇಲರ್ ನಾಳೆ ರಿಲೀಸ್ ಆಗಲಿದೆ, ಸಾಮಾನ್ಯವಾಗಿ ಶುಕ್ರವಾರ ಯಾವ ಸಿನಿಮಾಗಳು ಬಿಡುಗಡೆಯಾಗುತ್ತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಪುನೀತ್ ‘ನಟ ಸಾರ್ವಭೌಮ’ ಸಿನಿಮಾದ ಟ್ರೇಲರ್ ಫೀವರ್ ಜೋರಾಗಿದೆ….
ಒಂದು ಕಡೆ ಟ್ರೇಲರ್ ಬರಲು ಸಿದ್ದವಾಗಿದ್ದರೆ, ಮತ್ತೊಂದು ಕಡೆ ಸಿನಿಮಾದ ಹಾಡುಗಳು ಹಿಟ್ ಆಗಿದೆ. ಚಿತ್ರದ ‘ಯಾರೋ ನೀನು..’ ಹಾಡಿನ ಲಿರಿಕಲ್ ವಿಡಿಯೋ ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಡಿ ಇಮಾನ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅಪ್ಪು ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಫೆಬ್ರವರಿ 7 ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಪುನೀತ್ ಗೆ ಜೋಡಿಯಾಗಿದ್ದಾರೆ…