ಬೆಂಗಳೂರು:
ದೇಶದಲ್ಲಿ ಮೀ ಟೂ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಅವರವರ ನೋವುಗಳ ಬಗ್ಗೆ ಆಚೆ ಬಂದು ಮಾತನಾಡುತ್ತಿದ್ದಾರೆ ಎನ್ನುವ ಮೂಲಕ ಮೀ ಟೂ ಅಭಿಯಾನಕ್ಕೆ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಬೆಂಬಲ ಸೂಚಿಸಿದ್ದಾರೆ.
ಮಂಗಳೂರಿನ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಹುಡುಗ, ಹುಡುಗಿಯರಿಗೆ ಯಾರಿಗೆ ಆದರೂ ಅದು ದೌರ್ಜನ್ಯವೇ. ತಪ್ಪು ಆಗಿದ್ದರೆ ಶಿಕ್ಷೆ ಆಗಲೇಬೇಕು. ಆದರೆ ಮೀ ಟೂ ಹೆಸರಲ್ಲಿ ಕೆಲವರು ದುರ್ಲಾಭ ಪಡೆಯುತ್ತಿದ್ದಾರೆ. ಶ್ರುತಿಗೆ ನಿಜವಾಗಿಯೂ ದೌರ್ಜನ್ಯ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.
ಶ್ರುತಿ ಹರಿಹರನ್ ಒಳ್ಳೆ ಹುಡುಗಿ. ಆಕೆ ಯಾವತ್ತೂ ಅಸಂಬದ್ಧ ಮಾತಾಡಿಲ್ಲ. ಆಚೆ ಬಂದು ಮಾತನಾಡುವುದು ಒಳ್ಳೆಯದು. ಸುಮ್ಮನೇ ಯಾರು ಕೂಡ ಬಂದು ಮಾತನಾಡುವುದಿಲ್ಲ ಎಂದಿದ್ದಾರೆ……