ಬೆಂಗಳೂರು:
ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲಾಗಿದೆ. ಇತ್ತೀಚಿಗೆ ತನ್ನ 30ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ನ ಭರವಸೆಯ ನಾಯಕ ನಟ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಅಕ್ಟೋಬರ್ 6 ರಂದು ತನ್ನ ಹುಟ್ಟಹಬ್ಬ ಸಂದರ್ಭದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ , ಬೋರ್ಡ್ ಹಾಕಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಹಾಯಕ ಅಧಿಕಾರಿಗಳು ಧ್ರುವ ಸರ್ಜಾ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಟ ಅರ್ಜನ್ ಸರ್ಜಾ ಅವರ ಸಂಬಂಧಿ ಹಾಗೂ ನಟ ಚಿರಂಜೀವಿ ಸರ್ಜಾ ಅವರ ಸಹೋದರರಾಗಿರುವ ಧ್ರುವ ಸರ್ಜಾ, ತನ್ನ ವಿಭಿನ್ನ ಅಭಿನಯ, ಮ್ಯಾನರಿಸಂ, ಡೈಲಾಗ್ ಡೆಲಿವರಿಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಹುಟ್ಟಹಬ್ಬದ ವೇಳೆಯಲ್ಲಿ ಬನಶಂಕರಿಯಲ್ಲಿ ಬೃಹತ್ ಆಕಾರದ ಹೂಗಳಿಂದ ಅಲಂಕರಿಸಿದ ಫ್ಲೆಕ್ಸ್ ಬೋರ್ಡ್ ನ್ನು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ…….
.