ಸಿನಿಮಾ:
ಕೆ.ಜಿ.ಎಫ್ ಚಿತ್ರ ಬಿಡುಗಡೆಯಾದ ನಂತರ ಯಶ್,ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ಚಿತ್ರತಂಡದ ಜತೆ ಒರಾಯನ್ ಮಾಲ್ನಲ್ಲಿ ಚಿತ್ರ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.ಇನ್ನು ಇಂದು ನಾನೇನೇ ಆಗಿದ್ದರೂ ಅದಕ್ಕೆ ಕನ್ನಡಿಗರ ಪ್ರೀತಿ, ಅಭಿಮಾನವೇ ಕಾರಣ.ಕೆ.ಜಿ.ಎಫ್. ಚಿತ್ರ ಬಿಡುಗಡೆಯಾದ ಐದೂ ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಗಳಿಕೆಯಲ್ಲೂ ದಾಖಲೆ ನಿರ್ಮಿಸಿದೆ. ಹಾಗಾಗಿ ಚಿತ್ರತಂಡ ಚಿತ್ರಕ್ಕೆ ಮತ್ತಷ್ಟು ಅಡ್ವಾನ್ಸ್ ಸೌಂಡ್ ಎಫೆಕ್ಟ್ಸ್ ಅಳವಡಿಸಿದ್ದು, ಚಿತ್ರ ಮತ್ತಷ್ಟು ರಿಚ್ ಆಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ದಾರೆ……