Breaking News

ನಾಳೆ ರಾಜ್ಯವ್ಯಾಪಿ ಎಲ್ಲಾ ಆಸ್ಪತ್ರೆಗಳ ಓಪಿಡಿ ಬಂದ್..!

ರೋಗಿಗಳೇ ಎಚ್ಚರ....

SHARE......LIKE......COMMENT......

ಬೆಂಗಳೂರು:

ಮಿಂಟೋ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನ. 1ರಂದು ಹಲ್ಲೆ ಎಸಗಿದ ಪ್ರಕರಣ ಈಗ ದೊಡ್ಡ ಸ್ವರೂಪ ಪಡೆದುಕೊಳ್ಳುತ್ತಿದೆ. ಕರವೇ ಕಾರ್ಯಕರ್ತರಿಂದ ಹಲ್ಲೆಯಾಗಿದ್ದನ್ನು ಖಂಡಿಸಿ ನಾಳೆ ರಾಜ್ಯಾದ್ಯಂತ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಓಪಿಡಿ ವಿಭಾಗ ಬಂದ್ ಆಗಲಿದೆ. ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಆಸ್ಪತ್ರೆಗಳ ಹೊರರೋಗಿಗಳ ವಿಭಾಗಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಮಿಂಟೋ ಆಸ್ಪತ್ರೆಯ ವೈದ್ಯರ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಫನಾ ಸೇರಿದಂತೆ ವಿವಿಧ ವೈದ್ಯಕೀಯ ಸಂಘಗಳು ಬೆಂಬಲ ನೀಡಿವೆ. ಇದರಿಂದ ವೈದ್ಯರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ…..