ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ಅಷ್ಟಮಿ ತಿಥಿ ಸೋಮವಾರ ರೇವತಿ ನಕ್ಷತ್ರ |
ದಿನ ವಿಶೇಷತೆ :ಭೋಗಿ ಹಬ್ಬ |
ರಾಹುಕಾಲ :- ಬೆಳಿಗ್ಗೆ 08: 14 ರಿಂದ 09:40 ವರಿಗೆ |
ಯಮಕಂಟಕ ಕಾಲ:- ಬೆಳಿಗ್ಗೆ 11:06 ರಿಂದ 12:32 ವರಿಗೆ |
ಮೇಷ ವೃತ್ತಿಯಲ್ಲಿ ಸಮಾಧಾನಕರ ವಾತಾವರಣವಿರುತ್ತದೆ. ಬಿಡುವಿನ ದಿನದ ಸದುಪಯೋಗಪಡಿಸಿಕೊಳ್ಳುವಿರಿ. ದಂಪತಿಗಳು ಸರಸಮಯ ಕ್ಷಣಗಳನ್ನು ಕಳೆಯುವರು. |
|
ವೃಷಭ ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನವಾಗಲಿದೆ. ಮಿತ್ರರ ಜತೆಗೆ ಪ್ರವಾಸ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. |
|
ಮಿಥುನ
ಅವಿವಾಹಿತರಿಗೆ ಹೊಸ ವಿವಾಹ ಪ್ರಸ್ತಾಪಗಳು ಬಂದರೂ ಮನಸ್ಸಿಗೆ ಹಿತವೆನಿಸುವ ಸಂಬಂಧವಾಗಿರದು. ಪ್ರೇಮಿಗಳೂ ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾದೀತು. ದೇವರ ಪ್ರಾರ್ಥನೆ ಮಾಡಿ. |
|
ಕಟಕ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಶುಭ ಕಾರ್ಯ ಮಾಡಲು ಸೂಕ್ತ ಸಮಯವಲ್ಲ. ಆರ್ಥಿಕವಾಗಿ ಅಡಚಣೆ, ಅವಮಾನ, ಅಪವಾದಕ್ಕೆ ಗುರಿಯಾಗಬೇಕಾದೀತು. |
|
ಸಿಂಹ
ಆದಾಯ ಧಾರಾಳವಾಗಿರುತ್ತದೆ. ಆದರೆ ಅಷ್ಟೇ ಖರ್ಚುವೆಚ್ಚಗಳೂ ಇದ್ದು ಉಳಿತಾಯ ಕಾಣಲಾರಿರಿ. ಯಾರೊಂದಿಗೆ ವ್ಯವಹಾರ ಮಾಡುವುದಿದ್ದರೂ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಕೊಂಚ ಹಿನ್ನಡೆ ಅನುಭವಿಸಬೇಕಾದೀತು.
|
|
ಕನ್ಯಾನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಅರಸಿ ಬರಲಿವೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನತೆ ಕಂಡುಬಂದೀತು. ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ. ಕೈಗೊಳ್ಳುವ ಕೆಲಸಗಳಲ್ಲಿ ಅಡವಣೆ ಉಂಟಾಗುವುದನ್ನು ತಪ್ಪಿಸಲು ದೇವರ ಪ್ರಾರ್ಥನೆ ಮಾಡಿ.
|
|
ತುಲಾಮಾನಸಿಕವಾಗಿ ಯಾವುದೋ ಚಿಂತೆ ನಿಮ್ಮನ್ನು ಕಾಡಲಿದೆ. ಧನಲಾಭ ಯೋಗವಿದೆ. ಹೊಸ ವಸ್ತುಗಳ ಖರೀದಿ ಮಾಡುವಿರಿ. ಆದರೆ ದಾಯಾದಿಗಳಿಂದ ವಂಚನೆಗೊಳಗಾಗುವ ಸಾಧ‍್ಯತೆಯಿದೆ.
|
|
ವೃಶ್ಚಿಕಇದುವರೆಗೆ ನಿಮ್ಮನ್ನು ಬಾಧಿಸುತ್ತಿದ್ದ ಆರ್ಥಿಕ ಅಡಚಣೆ ನಿಧಾನವಾಗಿ ದೂರವಾಗುವುದು. ಉದ್ಯೋಗದಲ್ಲಿ ಮುನ್ನಡೆ ಸಾಧಿಸುವಿರಿ. ವಾಹನ ಖರೀದಿ ಯೋಗವಿದೆ. ಆದರೆ ನಷ್ಟ ಅನುಭವಿಸುವ ಸಾಧ್ಯತೆಯೂ ಇದೆ.
|
|
ಧನಸ್ಸುಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಶುಭ ಕಾರ್ಯ ಮಾಡಲು ಸೂಕ್ತ ಸಮಯವಲ್ಲ. ಆರ್ಥಿಕವಾಗಿ ಅಡಚಣೆ, ಅವಮಾನ, ಅಪವಾದಕ್ಕೆ ಗುರಿಯಾಗಬೇಕಾದೀತು.
|
|
ಮಕರ
ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಕೆಲಸ ಹಾಳುಗೆಡವಬೇಡಿ. ಕೆಲವೊಮ್ಮೆ ಸ್ವಾಭಿಮಾನ ಮರೆಯಬೇಕು. ತಾಳ್ಮೆಯಿಂದ ಮುನ್ನಡೆದರೆ ಅಭಿವೃದ್ಧಿ ಕಾಣುವಿರಿ. ಕುಟುಂಬದಲ್ಲೂ ಸಮಾಧಾನದಿಂದ ವ್ಯವಹರಿಸಿ.ಶುಭಸಂಖ್ಯೆ: 5 |
|
ಕುಂಭಕೈಗೊಂಡ ವ್ಯವಹಾರದಲ್ಲಿ ನಿವ್ವಳ ಲಾಭವಾಗಿ ಸಂತಸ ಮೂಡುವುದು. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಬಡ್ತಿ. ಆರ್ಥಿಕವಾಗಿ ಮುನ್ನಡೆ.
|
|
ಮೀನ
ಹಿತಶತ್ರುಗಳ ಕಾಟದಿಂದ ಮನಸ್ಸಿಗೆ ಕಿರಿ ಕಿರಿ. ಉದ್ಯೋಗಿಗಳಿಗೆ ಕಾರ್ಯದೊತ್ತಡವಿರುವುದು. ಕ್ರೀಡಾಳುಗಳಿಗೆ ಯಶಸ್ಸು. ಆರೋಗ್ಯ ಕೊಂಚ ಹದ ತಪ್ಪುವುದು.
|