ಶೃಂಗೇರಿ:
ಹಾಸನ ಕ್ಷೇತ್ರದಿಂದ ದೋಸ್ತಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಇಂದು ಶೃಂಗೇರಿಗೆ ಭೇಟಿ ನೀಡಿರೋ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.ಶಾರದಾಂಬೆ ಸನ್ನಿಧಿಯಲ್ಲಿ ಬಿ-ಫಾರಂ ಇಟ್ಟು ಪ್ರಜ್ವಲ್ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಸಿಎಂ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಸಹ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ರು. ಕಳೆದ ಸೋಮವಾರ ನಿಖಿಲ್ ಬಿ-ಫಾರಂ ಅನ್ನು ಶಾರದಾಂಬೆ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಲಾಗಿತ್ತು……