ಮಾಸ್ಕೋ:
ಯುವತಿಯರು ಬಿಕಿನಿ ಧರಿಸುವುದು ಕಾಮನ್. ಆದರೆ ರಷ್ಯಾದಲ್ಲಿ ಯುವಕರು ಬಿಟ್ಟಿ ಪೆಟ್ರೋಲ್ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಬಿಕಿನಿ ಧರಿಸಿ ವಿಶ್ವಾದ್ಯಂತ ಒಂದೇ ದಿನದಲ್ಲಿ ಸುದ್ದಿಯಾಗಿದ್ದಾರೆ. ರಷ್ಯಾದ ಸಮಾರಾದಲ್ಲಿರುವ ಓಲ್ವಿ ಗ್ಯಾಸ್ ಸ್ಟೇಷನ್ ಹೊಸ ವಿನೂತನ ಮಾರ್ಕೆಟಿಂಗ್ ತಂತ್ರಕ್ಕೆ ಕೈ ಹಾಕಿತ್ತು. ಬಿಕಿನಿ ಧರಿಸಿ ಪೆಟ್ರೋಲ್ ಬಂಕ್ ಬಳಿ ಬಂದವರಿಗೆ ಉಚಿತವಾಗಿ ಪೆಟ್ರೋಲ್ ಪೂರೈಸಲಾಗುತ್ತದೆ ಎಂದು ಪ್ರಕಟಿಸಿತ್ತು. ಆದರೆ ಬಿಕಿನಿಯನ್ನು ಮಹಿಳೆಯರು ಅಥವಾ ಪುರುಷರು ಇಬ್ಬರಲ್ಲಿ ಯಾರು ಧರಿಸಬೇಕು ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿರಲಿಲ್ಲ.
ಸಂಸ್ಥೆ ನೀಡಿದ್ದ ಆಫರಿನಿಂದ ಅನೇಕ ಪುರುಷರು ಅನುಕೂಲ ಪಡೆದುಕೊಂಡು, ಬಣ್ಣ ಬಣ್ಣದ ಬಿಕಿನಿ ಧರಿಸಿ ಓಲ್ವಿ ಗ್ಯಾಸ್ ಸ್ಟೇಷನ್ಗೆ ಬಂದಿದ್ದಾರೆ. ಹುಡುಗಿಯರ ರೀತಿ ಹೀಲ್ಸ್ ಹಾಕಿಕೊಂಡು ಸ್ಟೈಲಿಶ್ ಆಗಿ ಉಚಿತ ಪೆಟ್ರೋಲ್ ಕೇಳಲು ಹೋಗಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಿಕಿನಿ ಧರಿಸಿದ ಪುರುಷರ ಫೋಟೋಗಳು ವೈರಲ್ ಆಗುತ್ತಿದೆ. ಆದರೆ ಇದನ್ನು ನೋಡಿ ಮಾಲೀಕರು ಆಶ್ಚರ್ಯಪಟ್ಟು, ತಾವು ಮಾಡಿದ್ದ ಹೊಸ ಮಾರ್ಕೆಟಿಂಗ್ ತಂತ್ರದ ನಿಯಮವನ್ನು ಕೇವಲ ಮೂರು ಗಂಟೆಗಳಲ್ಲೇ ನಿಲ್ಲಿಸಿದ್ದಾರೆ……