ಬಾಲಕಿ ಮೇಲೆ ಅತ್ಯಾಚಾರ..!
ಹುಲಿವೇಷದ ತರಬೇತಿ ಪಡೆಯಲು ಬರುತ್ತಿದ್ದ ಬಾಲಕಿ....
ಮಂಗಳೂರಿನ ಕೆಲವು ಅಪರಾಧ ಪ್ರಕರಣದಲ್ಲಿ ಆರೋಪ ಎದುರಿಸಿದ್ದ ಆಕಾಶಭವನ ಶರಣ್ ಅತ್ಯಾಚಾರಗೈದ ಆರೋಪಿ ಎನ್ನಲಾಗಿದೆ. ಹುಲಿವೇಷ ತರಬೇತಿ ಪಡೆಯಲೆಂದು ಬಂದಿದ್ದ ಬಾಲಕಿಯನ್ನು ಜಿಲ್ಲೆಯ ಹೊರಗಿನ ಲಾಡ್ಜ್ ಒಂದಕ್ಕೆ ಕರೆದೊಯ್ದು ಅಲ್ಲಿ ಮೂರು ದಿನಗಳ ಕಾಲ ಉಳಿಸಿಕೊಂಡು ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ. ಘಟನೆ ನಡೆದು ಒಂದು ವಾರ ಕಳೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಬಾಲಕಿಯನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಶರಣ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ……