ಬೆಂಗಳೂರು:
ಮೆಟ್ರೋ ರೈಲು ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲೀಕ್ ಆಗಿ ಜನರಲ್ಲಿ ಆತಂಕ ಹೆಚ್ಚಾಗಿತ್ತು. ಕೆ.ಆರ್.ಪುರ ಬಳಿಯ ಗರುಡಾಚಾರ್ ಪಾಳ್ಯದಲ್ಲಿ ಮೆಟ್ರೋ ರೈಲು ಕಾಮಗಾರಿಯ ವೇಳೆ 70 ಕಿಲೋ ಫೋರ್ಸ್ನ ಗ್ಯಾಸ್ ಪೈಪ್ ಲೈನ್ ಡ್ಯಾಮೇಜ್ ಉಂಟಾಗಿತ್ತು.
ಗ್ಯಾಸ್ ಲೀಕೆಜ್ನಿಂದ ಸುತ್ತಮುತ್ತಲ ಪ್ರದೇಶದಲ್ಲಿರೋ ಶಾಲೆ-ಕಾಲೇಜಿಗೆ ರಜೆ ಘೊಷಿಸಲಾಗಿದ್ದು, ಅಂಗಡಿ-ಮುಂಗಟ್ಟುಗಳ ಬಾಗಿಲು ಬಂದ್ ಮಾಡಲಾಗಿದೆ. ಗ್ಯಾಸ್ ಪೈಪ್ ಲೀಕ್ನಿಂದಾಗಿ ಐಟಿಪಿಎಲ್ ರಸ್ತೆಯಲ್ಲಿ ಸತತ 5 ಗಂಟೆಗಳಿಂದಲೂ ಟ್ರಾಫಿಕ್ ಜಾಮ್ ಉಂಟಾಗಿದ್ದು ನೂರಾರು ಉದ್ಯೋಗಿಗಳು ಕಿರಿಕಿರಿ ಅನುಭವಿಸ್ತಿದ್ದಾರೆ.
ಗ್ಯಾಸ್ ಪೈಪ್ ಲೈನ್ನನ್ನು ಅಗ್ನಿಶಾಮಕ ಸಿಬ್ಬಂದಿ 12 ಅಡಿ ರಸ್ತೆ ಅಗೆದು ಪತ್ತೆ ಹಚ್ಚಿದ್ದಾರೆ. ಗ್ಯಾಸ್ ಪೈಪ್ನ ಎರಡೂ ಭಾಗದಲ್ಲಿ ಕತ್ತರಿಸಿ ನಂತರ ವೆಲ್ಡಿಂಗ್ ಮಾಡಲಾಗಿದ್ದು, ಗ್ಯಾಸ್ ಹರಿಯುವಿಕೆಯನ್ನು ನಿಲ್ಲಿಸಲಾಗಿದೆ……