ಬೆಂಗಳೂರು:
ಗಾರ್ಬೇಜ್ ಸಿಟಿ ಅಂತಾ ಕುಖ್ಯಾತಿ ಪಡೆದಿದ್ದ ಬೆಂಗಳೂರಿಗೆ ಈಗ ಮತ್ತೊಂದು ಕುಖ್ಯಾತಿ. ಇದೀಗ ವಿಶ್ವದ ವರ್ಸ್ಟ್ ಟ್ರಾಫಿಕ್ ಸಿಟಿ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ವಿಶ್ವದ 193 ದೇಶಗಳಲ್ಲೇ ನಂಬರ್ 1 ಸ್ಥಾನದಲ್ಲಿ ಭಾರತವಿದೆ. ಜನಸಂಖ್ಯಾ ಸ್ಫೋಟ, ಕೆಟ್ಟ ರಸ್ತೆಗಳು, ಹೆಚ್ಚಿನ ವಾಹನಗಳ ಸಂಖ್ಯೆ, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು. ವಿವಿಐಪಿ ಸಂಸ್ಕೃತಿ, ಧಾರ್ಮಿಕ ಹಾಗೂ ರಾಜಕೀಯ ಮೆರವಣಿಗೆಗಳು, ಪ್ರತಿಭಟನೆಗಳು ಇಡೀ ಬೆಂಗಳೂರನ್ನು ಟ್ರಾಫಿಕ್ ಸಿಟಿಯನ್ನಾಗಿ ಮಾಡಿದೆ.
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ವರ್ಷದಲ್ಲಿ 243 ಗಂಟೆ ಟ್ರಾಫಿಕ್ ನಲ್ಲೇ ಕಾಲ ಕಳೆಯುತ್ತಾನೆ. ಆತ ಜರ್ನಿ ಮಾಡಲು ಬೇಕಾದ ಶೇಕಡಾ 75ರಷ್ಟು ಹೆಚ್ಚು ಸಮಯವನ್ನು ತಗೆದುಕೊಳ್ತಾನೆ. ಅಂದರೆ 10 ದಿನ 3 ಗಂಟೆಯನ್ನು ಟ್ರಾಫಿಕ್ನಲ್ಲೇ ಕಳೆಯಬೇಕು ಎಂದು ಡೆನ್ಮಾರ್ಕ್ನ ನ್ಯಾವಿಗೇಷನ್ ಅಳವಡಿಕೆ ಕಂಪನಿಯಾದ ಟಾಂ ಟಾಂ ವರದಿ ರಿಲೀಸ್ ಮಾಡಿದೆ. ಪ್ರತಿವರ್ಷ ಭಾರತದಲ್ಲಿ ಸಂಚಾರ ದಟ್ಟಣೆಯಿಂದ ಅಂದಾಜು 15 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ವರದಿ ಹೇಳಿದೆ. ಈ ಮೊದಲು 2009ರಲ್ಲಿ ಕಸದ ಸಮಸ್ಯೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ತಲೆತಗ್ಗಿಸುವಂತಾಗಿತ್ತು. ಟ್ರಾಫಿಕ್ ಇರುವ ವಿಶ್ವದ ಟಾಪ್ 10 ಸಿಟಿಗಳಲ್ಲಿ ಮುಂಬೈ, ದಿಲ್ಲಿ, ಪುಣೆ ಕೂಡಾ ಸೇರಿವೆ. 57 ದೇಶಗಳ 416 ನಗರಗಳ ಸಂಚಾರ ದಟ್ಟಣೆಯನ್ನು ಅಧ್ಯಯನ ಮಾಡಿ ಈ ಱಂಕ್ ನೀಡಲಾಗಿದೆ……