Breaking News

ಮನೋಹರ್​​ ಪರಿಕ್ಕರ್​​​ ದೇಹಸ್ಥಿತಿ ಇನ್ನಷ್ಟು ಗಂಭೀರ..!

ಸರ್ಕಾರ ರಚನೆಗೆ ಕಾಂಗ್ರೆಸ್​ ಪಕ್ಷ ಗೌರ್ನರ್​​ಗೆ ಪತ್ರ....

SHARE......LIKE......COMMENT......

ಗೋವಾ:

ಗೋವಾ ಮುಖ್ಯಮಂತ್ರಿ ಮನೋಹರ್​​ ಪರಿಕ್ಕರ್​​​ ದೇಹಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಹೀಗಾಗಿ ಕಾಂಗ್ರೆಸ್​ ಪಕ್ಷದ ಮೃದುಲಾ ಸಿನ್ಹಾ ಗೋವಾ ಗೌರ್ನರ್​​ಗೆ ಪತ್ರ ಸಲ್ಲಿಸಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದ್ದಾರೆ. ಇದ್ರಿಂದ ಅಲರ್ಟ್ ಆಗಿರೋ ಬಿಜೆಪಿ ನಾಯಕರು ಇದೀಗ ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ. ನಿನ್ನೆ ಸಂಜೆ ಬಿಜೆಪಿ ದಿಢೀರ್​​ ಶಾಸಕಾಂಗ ಸಭೆ ನಡೆಸಿತು. ಈ ಸಭೆಯಲ್ಲಿ ಕೇಂದ್ರದಿಂದ ಉಸ್ತುವಾರಿಗಳನ್ನು ಕಳಿಸಿ ಶಾಸಕರಲ್ಲಿ ಒಬ್ಬರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಒತ್ತಾಯ ಮಾಡಲಾಗಿದೆ.

ಮೈತ್ರಿ ಸರ್ಕಾರ ಬೆಂಬಲಿಸುವ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮೂವರು ಪಕ್ಷೇತರರ ಜತೆ ಸಭೆ ನಡೆಸಿ ಸಿಎಂ ಯಾರಾಗಬೇಕು ಅನ್ನೋ ನಿರ್ಧಾರಕ್ಕೆ ಬಿಜೆಪಿ ನಾಯಕರು ಬರಲಿದ್ದಾರೆ. ನಿನ್ನೆ ಸಂಜೆಯೇ ಮೂವರು ಪಕ್ಷೇತರರು ಸೇರಿ ಹಲವು ಶಾಸಕರು ಪರಿಕ್ಕರ್​​ ಖಾಸಗಿ ನಿವಾಸಕ್ಕೆ ಭೇಟಿ ನೀಡಿ ತಮ್ಮ ಅಭಿಪ್ರಾಯವನ್ನೂ ತಿಳಿಸಿದ್ದಾರೆ.

ಇನ್ನು 40 ಕ್ಷೇತ್ರಗಳ ಗೋವಾ ಅಸೆಂಬ್ಲಿಯಲ್ಲಿ ಕಾಂಗ್ರೆಸ್​ 14, ಬಿಜೆಪಿ 13 ಶಾಸಕರನ್ನು ಹೊಂದಿದೆ. ಸರ್ಕಾರ ರಚನೆಗೆ 22 ಶಾಸಕರ ಬಲ ಬೇಕಿದ್ದು ಬಿಜೆಪಿಗೆ 3 ಸದಸ್ಯರಿರುವ ಎಂಜಿಪಿ, 3 ಶಾಸಕರಿರುವ ಜಿಎಫ್​​ಪಿ ಮತ್ತು ಮೂವರು ಪಕ್ಷೇತರರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್​ಗೆ ಒಂದು ಸ್ಥಾನ ಗೆದ್ದಿರುವ ಎನ್​ಸಿಪಿ ಬೆಂಬಲ ನೀಡಿದೆ. ಚುನಾವಣೆ ನಂತರ ಮೂರು ಸ್ಥಾನಗಳು ಖಾಲಿ ಇವೆ……