Breaking News

ಮುತ್ತಪ್ಪ ರೈಗೆ ‘ಆಯುಧ’ ಪೂಜೆ ಸಂಕಷ್ಟ..!

ರೈಗೆ ಸಿಸಿಬಿಯಿಂದ 8ಗಂಟೆ ಡ್ರೀಲ್....

SHARE......LIKE......COMMENT......

ಬೆಂಗಳೂರು:

ಆಯುಧ ಪೂಜೆಯಂದು ಮಾರಕಾಸ್ತ್ರಗಳನ್ನು ಇಟ್ಟು ಪೂಜಿಸಿ ನಾಗರೀಕರು ಹೆದರುವಂತೆ ಮಾಡಿದ ಆರೋಪದಡಿ ಸಿಸಿಬಿ ಪೊಲೀಸರು ನೋಟಿಸ್​ ಜಾರಿ ಮೇಲೆ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ರು.

ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ರು. ಇನ್ನು, ವಿಚಾರಣೆ ವೇಳೆ ಲೈಸೆನ್ಸ್ ದಾಖಲೆಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಅಲ್ಲದೇ ಗನ್​ಮ್ಯಾನ್​ಗಳ ಬಗ್ಗೆ ಮಾಹಿತಿ ಕಲೆ ಹಾಕಿರೋ ಸಿಸಿಬಿ ಮುತ್ತಪ್ಪ ರೈಗೆ ಖಾಸಗಿ ಗನ್​ಮ್ಯಾನ್​ಗಳು ಸೆಕ್ಯೂರಿಟಿ ಏಜೆನ್ಸಿ ಕಡೆಯಿಂದ ನಿಯೋಜಿತವಾಗಿರೋದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು ಈ ಸಂಬಂಧ ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ ಸಿಸಿಬಿ ಪೊಲೀಸರು 7 ಜನ ಗನ್​ ಮ್ಯಾನ್​ಗಳನ್ನ ವಶಕ್ಕೆ ಪಡೆದಿದ್ದು ಕಾಟನ್​ ಪೇಟೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಈ ವೇಳೆ ಮುತ್ತಪ್ಪ ರೈ ನಾನು ಯಾವ ತಪ್ಪು ಮಾಡಿಲ್ಲ. ಗನ್ ಲೈಸೆನ್ಸ್ ರದ್ದಾಗಿರುವುದು ನನ್ನ ತಪ್ಪಲ್ಲ.. ನಾನು ಯಾವ ಅಕ್ರಮವನ್ನು ಮಾಡಿಲ್ಲವೆಂದ್ರು…..