ಬ್ಯೂಟಿ ಟಿಪ್ಸ್:
ನೈಟ್ ಫಂಕ್ಷನ್ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ಮಲಗಿದರೆ ಸಾಕು ಎಂದು ಅನಿಸಿ ಬಿಟ್ಟಿರುತ್ತದೆ, ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ ಬಿಡುತ್ತೇವೆ ಅಲ್ವಾ?
ಮೇಕಪ್ ತೆಗೆಯದೆ ಹಾಗೆಯೇ ಮಲಗಿದರೆ ಈ ರೀತಿಯ ಅಡ್ಡ ಪರಿಣಾಮ ಗ್ಯಾರೆಂಟಿ:
* ಫಂಕ್ಷನ್‌ಗೆ ಹೊರಡುವಾಗ ಹಚ್ಚಿದ ಐ ಶ್ಯಾಡೋ, ಐ ಲೈನರ್ ಇವುಗಳನ್ನು ಮಲಗುವ ಮುನ್ನ ತೆಗೆಯದೆ ಮಲಗಿದರೆ ಕಣ್ಣಿನಲ್ಲಿ ತುರಿತ ಉಂಟಾಗುವುದು.
* ಮೇಕಪ್‌ನಲ್ಲಿಯೇ ಮಲಗುವುದರಿಂದ ಬ್ಲ್ಯಾಕ್‌ಹೆಡ್ಸ್ ಸಮಸ್ಯೆ ಕಂಡು ಬರುವುದು.
* ಮಲಗುವ ಮುನ್ನ ತುಟಿಯ ಲಿಪ್‌ಸ್ಟಿಕ್ ತೆಗೆಯದಿದ್ದರೆ ತುಟಿ ಕಪ್ಪಾಗುವುದು. ಲಿಪ್‌ಸ್ಟಿಕ್ ತೆಗೆದು ತುಟಿಗೆ ಜೇನು ಹಚ್ಚಿ ಮಲಗುವುದು ಒಳ್ಳೆಯದು.
* ದಿನಾ ಪೂರ್ತಿ ಮೇಕಪ್‌ನಲ್ಲಿದ್ದರೆ ಮುಖ ಬೇಗನೆ ಸುಕ್ಕು ಕಟ್ಟುವುದು……