Breaking News

ಯಾವ ಹೋಮದಿಂದ ಯಾವ ಫಲ ದೊರೆಯುತ್ತದೆ..?

SHARE......LIKE......COMMENT......

ಧಾರ್ಮಿಕ ಪರಂಪರೆ:

1. ಗಣಪತಿ/ಗಂ ಹೋಮ:

ಈ ಹೋಮ ಮಾಡುವುದರಿಂದ ಎಲ್ಲ ಕಷ್ಠ, ನಷ್ಠ, ತೊಂದರೆ ನಿವಾರಣೆಯಾಗುವುದಕ್ಕೆ ಮಾಡುವ ಹೋಮ.

2. ನವಗ್ರಹ ಹೋಮ:

ನೆಮ್ಮದಿ, ಶಾಂತಿ, ಗ್ರಹಣದಲ್ಲಿ ಆಗುವ ದೋಷಗಳಿಗೆ ಹಾಗೂ ನವಗ್ರಹಗಳಲ್ಲಿ ತೊಂದರೆ ತಾಪತ್ರಯವಿದ್ದಾಗ ಸಕಲ ಕಷ್ಟಗಳನ್ನು ಹೋಗಲಾಡಿಸಲು ಮಾಡುವ ಹೋಮ.

3. ಪುರುಷ ಸೂಕ್ತ ಹೋಮ:

ಎಲ್ಲ ಆಸೆ ಈಡೇರುವುದಕ್ಕೆ, ಮನೆ, ವಿದ್ಯಾಭ್ಯಾಸದಲ್ಲಿ ತೊಂದರೆ ಆದ ಕಾರಣ ಬುಧಗ್ರಹ ದೋಷವಿದ್ದು ನಿವಾರಣೆಗಾಗಿ, ವ್ಯಾಪಾರದಲ್ಲಿ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿದರೆ ಅಭಿವೃದ್ಧಿ, ಯಶಸ್ಸು, ಏಳಿಗೆ ದೊರೆಯುತ್ತದೆ.

4.ಅರುಣ ಹೋಮ:

ಸದಾ ಕಾಯಿಲೆಯಿಂದ ನರಳುವಿಕೆ, ಸಂತಾನಭಾಗ್ಯವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಅಭಿವೃದ್ದಿ, ಯಶಸ್ಸು, ಏಳಿಗೆ ದೊರೆಯುತ್ತದೆ.

5. ತಿಲ ಹೋಮ:

ಪಿತೃ ಶಾಪ ನಿವಾರಣೆ ಹಾಗೂ ಪಿತೃಶಾಪದಿಂದ ಮಕ್ಕಳ ಫಲವಿಲ್ಲದಿದ್ದಾಗ ಈ ಹೋಮವನ್ನು ಮಾಡಿದರೆ ಫಲ ದೊರೆಯುತ್ತದೆ.

6. ಚಮಕ ಹೋಮ:

ಅಂದುಕೊಂಡ ಕಾರ್ಯದಲ್ಲಿ ಹಿನ್ನಡೆ ಯಾವ ಕೆಲಸ ಮಾಡಲು ಹೋದರು ಈಡೇರುವುದಿಲ್ಲ . ಆ ಸಂದರ್ಭದಲ್ಲಿ ಈ ಹೋಮ ಮಾಡಿದರೆ ಎಲ್ಲ ಕಾರ್ಯದಲ್ಲಿ ಹಾಗೂ ಎಲ್ಲ ಬೇಡಿಕೆಗಳು ಈಡೇರುತ್ತದೆ.

7.ಭೂ ಸೂಕ್ತ ಹೋಮ:

ಎಷ್ಟೆ ಬೆಳೆ ಬೆಳೆದರು ಬೆಳೆ ಕೈಗೆ ಬರುವುದಿಲ್ಲ ನಷ್ಠ ಮನೆಯಲ್ಲಿ ನೆಮ್ಮದಿ ಶಾಂತಿ ಇರುವುದಿಲ್ಲ. ವಾಸ್ತು ದೋಷದಿಂದ ಬರುವ ತೊಂದರೆಗಳು, ಆರೋಗ್ಯ ಬಲವಿರುವುದಿಲ್ಲ. ಅಂತಹ ಸಂಧರ್ಭದಲ್ಲಿ ಈ ಹೋಮ ಮಾಡಿದರೆ ಶುಭ.

8. ಆಯಸ್ಸು ಹೋಮ:

ಸದಾಭಯ, ಆರೋಗ್ಯದಲ್ಲಿ ಏರುಪೇರು, ದಶಾಬುಕ್ತಿಕಾಲದಲ್ಲಿ ಆಗುವ ತೊಂದರೆ ಗಂಡಾಂತರಗಳು, ಇದ್ದಾಗ ಆಯಸ್ಸು, ಆರೋಗ್ಯ, ನೆಮ್ಮದಿ ದೊರಕಲು ಈ ಹೋಮ ಮಾಡಿದರೆ ಶುಭ.

9. ಮಹಾ ರಕ್ಷೋಘ್ನ ಹೋಮ
ಮಾಟ, ಮಂತ್ರ, ಅಭಿಜಾರ, ಸದಾ ಕಾಯಿಲೆ, ಕೆಟ್ಟಕನಸ್ಸು, ಮನೆಯಲ್ಲಿ ಜಗಳ, ಕದನ, ಕಲಹ, ಗಂಡ ಹೆಂಡತಿಯಲ್ಲಿ ವಿರಸ, ಆತ್ಮಹತ್ಯೆಯಾದ ಮನೆ, ಶತೃಭಯ, ಅಕಾಲ ಮರಣ,ಚೋರಭಯ ಮುಂತಾದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ.

10. ಶ್ರೀ ಗಾಯತ್ರಿ ಹೋಮ:

ಬ್ರಹ್ಮಹತ್ಯೆ, ಭ್ರೂಣಹತ್ಯೆ, ಶರೀರದಲ್ಲಿ ಬೇರೆ ಆತ್ಮ ಸೇರುವುಕೆ, ಮಾಟ, ಮಂತ್ರ, ಅಭಿಚಾರ ಮುಂತಾದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ-ಲಾಭ.

11. ಸರ್ಪಸೂಕ್ತ ಹೋಮ:

ಮಕ್ಕಳ ಫಲ ಇಲ್ಲದವರಿಗೆ, ಚರ್ಮದ ಕಾಯಿಲೆ ಇದ್ದರೆ ಈ ಹೋಮವನ್ನು ಮಾಡಿದರೆ ಶುಭ.

12. ಧನ್ವಂತ್ರಿ ಹೋಮ:

ಯಾವಾಗಲು ಕಾಯಿಲೆಯಿಂದ ನರಳುವಿಕೆ, ಎಷ್ಟೇ ಔಷಧಿ ಉಪಚಾರ ಮಾಡಿದರು. ಕಾಯಿಲೆವಾಸಿಯಾಗದಿದ್ದರೆ, ಕಾಯಿಲೆ ನಿವಾರಣೆಗೆ ಆರೋಗ್ಯಭಾಗ್ಯಕ್ಕೆ ಈ ಹೋಮವನ್ನು ಮಾಡಿಸಿದರೆ ಸೂಕ್ತ.

13.ಭಾಗ್ಯ ಸೂಕ್ತ ಹೋಮ:

ಕಷ್ಠ, ನಷ್ಠ, ದಾರಿದ್ರ್ಯತೆಯ ನಿವಾರಣೆಗೆ ಹಾಗೂ ಎಲ್ಲ ರೀತಿಯ ಸುಖ, ಸಂತೋಷ, ಸೌಭಾಗ್ಯ ದೊರಕಲು ಈ ಹೋಮವನ್ನು ಮಾಡಿದರೆ ಶುಭ.

14. ತ್ರಿಸುಪರ್ಣ ಮಂತ್ರ ಹೋಮ:

ಗರ್ಭನಿಲ್ಲದಿದ್ದಾಗ ಯಾವಾಗಲು ಗರ್ಭಪಾತವಾಗುತ್ತಿದ್ದರೆ ಗರ್ಭರಕ್ಷಣೆಗೆ ಈ ಹೋಮ ಮಾಡಿಸಿದರೆ ಒಳ್ಳೆಯದಾಗುತ್ತದೆ.

15. ಮರಣ ಸೂಕ್ತ ಹೋಮ:

ಮೂತ್ರ ಪಿಂಡಕ್ಕೆ ಸಂಬಂಧಿಸಿದ ತೊಂದರೆಗಳು ಇದ್ದಾಗ ಮೂತ್ರ ಪಿಂಡ ರಕ್ಷಣೆಗೆ ಈ ಹೋಮ ಮಾಡಿದರೆ ಅನುಕೂಲವಾಗುತ್ತದೆ.

16. ಅನ್ನ ಸೂಕ್ತ ಹೋಮ:

ಭೋಜನಕ್ಕೆ ಕುಳಿತಾಗ ಅನ್ನವನ್ನು ತಿನ್ನಬೇಕೆಂದು ಅನಿಸಿದರು ಅನ್ನ ತಿನ್ನುವುದಕ್ಕೆ ಆಗುವುದಿಲ್ಲ ನಿರಾಕರಣೆ ಮಾಡುವ ಸಂದರ್ಭದಲ್ಲಿ ಈ ಹೋಮ ಮಾಡಬೇಕು.

17. ರುದ್ರ ಸೂಕ್ತ ಹೋಮ:

ಜೀವನದಲ್ಲಿ ಬರಿ ಸಾಕಷ್ಟು ತೊಂದರೆಗಳು ಕಷ್ಠ, ನಷ್ಠ, ವಿಪರೀತ ಕೋಪ, ಉನ್ನತ ಪದವಿ ದೊರಕದಿದ್ದಾಗ, ಈ ಹೋಮ ಮಾಡಿದರೆ ಶುಭ.

18.ಅಗ್ನಿ ಸೂಕ್ತ ಹೋಮ:

ಆರೋಗ್ಯದಲ್ಲಿ ತೊಂದರೆ ಎದೆಉರಿ, ಹೊಟ್ಟೆಉರಿ, ಹೊಟ್ಟೆ ಉಬ್ಬರ, ಅಜೀರ್ಣದ ತೊಂದರೆಗಳು ಇದ್ದಾಗ ಈ ಹೋಮ ಮಾಡಿದರೆ ಶುಭ.

19. ಮನ್ಯು ಸೂಕ್ತ ಹೋಮ:

ಮನೆಯಲ್ಲಿ ಸದಾ ಭಯದ ವಾತಾವರಣ, ಗಾಭರಿ, ಭಯ ಮಾಡುವ ಕೆಲಸದ ಜಾಗದಲ್ಲಿ ಕಿರುಕುಳ, ಆಪ-ಆದನೆ, ಶತೃಗಳಿಂದ ತೊಂದರೆ ಇದ್ಧಾಗ ಈ ಹೋಮವನ್ನು ಮಾಡಿದರೆ ಶುಭ.

20. ಪವಮಾನ ಸೂಕ್ತ ಹೋಮ:

ಆತ್ಮಗಳಿಂದ ತೊಂದರೆ, ತಿಳಿದೂ ತಿಳಿಯದೂ ಮಾಡಿದ ಪಾಪ ಕರ್ಮಗಳು, ಸದ್ಗತಿ ಮೋಕ್ಷ ಪಡೆಯಲ್ಲು ಈ ಹೋಮವನ್ನು ಮಾಡಿದರೆ ಶುಭ.

21. ಕುಬೇರ ಹೋಮ:

ಮಾಡುವ ವ್ಯಾಪಾರದಲ್ಲಿ ನಷ್ಠ, ಕೊಟ್ಟ ಹಣ ವಾಪಸು ಬರದೇ ಇರುವುಕೆ, ಹಣ ವಸೂತಿಗೆ, ವ್ಯಾಪಾರದಲ್ಲಿ ಲಾಭ ದೊರಕುವುದಕ್ಕೆ ಈ ಹೋಮ ಮಾಡಿದರೆ ಶುಭ.

22.ಸ್ವಯಂವರ ಕಾಳ ಹೋಮ:

ಎಷ್ಟೇ ಪ್ರಯತ್ನ ಮಾಡಿದರೂ ವಿವಾಹದ ಕಾರ್ಯದಲ್ಲಿ ವಿಳಂಬ, ಹಾಗೂ ದಾಂಪಾತ್ಯದ ವಿಚಾರದಲ್ಲಿ ಸದಾ ಜಗಳ ಕಲಹ, ಅನ್ಯೋನ್ಯತೆ ಇಲ್ಲದಿದ್ದಾಗ ಈ ಹೋಮ ಮಾಡಿಸಿದರೆ ಶುಭ.

23.ದುರ್ಗಾ ಸೂಕ್ತ ಹೋಮ:

ಭಾನಾಮತಿ ಮಾಟಮಂತ್ರ ಪ್ರಯೋಗ, ದೇಹದಲ್ಲಿ ಬಲವಿಲ್ಲದೆ ಇರುವುದು ಆತ್ಮಗಳಿಂದ ಆಗುವ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿಸಿದರೆ ಶುಭ.

24. ಬಾಲಗ್ರಹ ಹೋಮ: 

ಮಕ್ಕಳು ಬೆಚ್ಚಿ ಬೀಳುವುದು, ಸದಾ ಹಟ,ಅಳು ಚಂಡಿ ಹಿಡಿಯುವುದು, ಅನ್ನವನ್ನು ತಿನ್ನಲು ನಿರಾಕರಿಸುವುದು ವಾಂತಿ ಮಾಡಿಕೊಳ್ಳುವುದು, ಜ್ವರದ ತೊಂದರೆ ಇದ್ದಾಗ ಈ ಹೋಮ ಮಾಡಿಸಿದರೆ ಶುಭ.

25. ಸುಬ್ರಹ್ಮಣ್ಯ ಹೋಮ:

ಅಪರೇಷನ್‌ ಮಾಡುವ ಸಂದರ್ಭದಲ್ಲಿ ತೊಂದರೆ ಆಗದೆ ಇರುವುದಕ್ಕೆ ಅಪಘಾತವಾಗಿದ್ದಾಗ ಬೇಗ ವಸಿಯಾಗಲು ಬೆಂಕಿಯಿಂದ ತೊಂದರೆಯಾಗಿದ್ದಾಗ ಬೇಗ ಗುಣಮುಖರಾಗಲು ಈ ಹೋಮವನ್ನು ಮಾಡಿಸಬೇಕು……