ಸಿನಿಮಾ:
ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಕ್ ಲೈನ್ ವೆಂಕಟೇಶ್ ರವರ ಮೊಬೈಲ್ನ್ ವಶಕ್ಕೆ ಪಡೆದು ಮನೆಯಲ್ಲಿ ಕಡತಗಳ ಪರಿಶೀಲನೆ, ಎಸ್ ಬಿ ಐ, ಎಚ್ ಎಸ್ ಬಿ ಸಿ, ಐಸಿಐಸಿಐ ಬ್ಯಾಂಕ್ ನ ಖಾತೆಗಳು,ನೆಲಮಂಗಲ, ದೇವನಹಳ್ಳಿ, ಪೀಣ್ಯ ಬಳಿಯ ಎಕರೆಗಟ್ಟಲೆ ಜಾಗದ ದಾಖಲೆಗಳ ಪರಿಶೀಲನೆ.ನಟಸಾರ್ವಭೌಮ ಬಿಗ್ ಬಜೆಟ್ ಸಿನಿಮಾಕ್ಕೆ ಹಣ ಬಂದಿದ್ದೆಲ್ಲಿ ಅನ್ನೋದರ ಬಗ್ಗೆ ಹಾಗೂ ವೆಂಕಟೇಶ್ ಪತ್ನಿ ಹೆಸರಿನ ಬ್ಯಾಂಕ್ ಡಿಟೈಲ್ ಪರಿಶೀಲನೆ,ವೆಂಕಟೇಶ್ ಗೆ ಸೇರಿದ ಚರಾಸ್ಥಿಗಳ ಸಂಬಂಧ ಜೊತೆಗೆ ಮಗನ ಹೆಸರಲ್ಲಿರುವ ರಾಕ್ ಲೈನ್ ಮಾಲ್ ಬಗ್ಗೆಯೂ ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಒಟ್ಟು ೮ ಆದಾಯ ತೆರಿಗೆ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದು.ರಾಕ್ ಲೈನ್ ವೆಂಕಟೇಶ್ ರ ಲಾಕರ್ ಗಳು ಹಾಗು ಬ್ಯಾಂಕ್ ಅಕೌಂಟ್ ದಾಖಲೆಗಳ ಪರಿಶೀಲನೆಯನ್ನ ಸತತ ಕಳೆದ 6 ಗಂಟೆಗಳಿಂದ ನಡೆಸಲಾಗುತ್ತಿದೆ ದಾಳಿ ವೇಳೆ ೨ ಕೆ.ಜಿಯಷ್ಟು ಚಿನ್ನಾಭರಣ.೨೦ ಕೆ.ಜಿಗೂ ಹೆಚ್ಚು ಬೆಳ್ಳಿಯ ಸಾಮಾಗ್ರಿಗಳಿರೋದು ಪತ್ತೆಯಾಗಿದೆ……