Breaking News

ರಾಜಕೀಯವಾಗಿ ನನ್ನ ತಡವುತ್ತಿದ್ದಾರೆ..!

ಜಾರಕಿಹೊಳಿ ಬ್ರದರ್ಸಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್

SHARE......LIKE......COMMENT......

ದಾವಣಗೆರೆ:

ರಾಜಕೀಯವಾಗಿ ನಾನು ಯಾರನ್ನು ತಡವುದಿಲ್ಲ. ಆದರೆ ಅವರಾಗಿಯೇ ನನ್ನನ್ನು ತಡವುತ್ತಿದ್ದಾರೆ‌ ಎಂದು ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ವೀರಶೈವ ಪಂಚಮಸಾಲಿ ಗುರುಪೀಠದಲ್ಲಿ ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ 81ನೇ ಜಯಂತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾಗಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೆಬ್ಬಾಳ್ಕರ್​, ಜೀವನದುದ್ದಕ್ಕು ಸಂಘರ್ಷದ ಹಾದಿಯಲ್ಲಿ ನಡೆದು ಬಂದಿದ್ದೇನೆ. ಮಹಿಳೆಯರು ಭಾವ ಜೀವಿಗಳಾಗಿರುತ್ತಾರೆ, ಅವರ ಏಳಿಗೆ ಸಹಿಸದವರು ಈ ಸಮಾಜದಲ್ಲಿದ್ದಾರೆ. ಹೀಗಾಗಿಯೇ ನಾನು ನನ್ನ ರಾಜಕೀಯ ಜೀವನದಲ್ಲಿ ದಿಟ್ಟತನದಿಂದ ನಡೆಯುತ್ತಿದ್ದೇನೆ ಎಂದರು.

ಹಿರಿಯರು, ಶ್ರೀಗಳು ನನಗೆ ಬಹಳ ಸ್ಪೀಡ್​ನಲ್ಲಿ ಹೋಗುತಿದೀಯಾ ಅಂತಾ ಬುದ್ಧಿವಾದ ಹೇಳುತ್ತಿದ್ದಾರೆ. ಅದಕ್ಕೆ ನಾನು ತಲೆ ಬಾಗುತ್ತೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇತಿಹಾಸದಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ. ಪಂಚಮಸಾಲಿ ಸಮಾಜ ಕಲಿಸಿದ ಆದರ್ಶದಿಂದ ಮಾರಾಠ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಗೆದ್ದಿದ್ದೇನೆ. ಗೆದ್ದಿರುವ ನಾನು ಇತರೆ ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಜೊತೆಯಲ್ಲಿ ಸಾಗುವ ಧ್ಯೇಯ ಹೊಂದಿರುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ರಾಜ್ಯದಲ್ಲಿ ಆಧ್ಯಾತ್ಮಿಕತೆಗೆ ಹೊಸದೊಂದು ಆಯಾಮ ನೀಡುವಲ್ಲಿ ಪಂಚಮಸಾಲಿ ಸಮಾಜದ ಎರಡೂ ಪೀಠಗಳು ತನ್ನದೇ ಆದ ಕೊಡುಗೆ ನೀಡಿವೆ. ಕೆಲ ವೈಚಾರಿಕ ಭಿನ್ನಾಭಿಪ್ರಾಯಗಳಿಂದ ದೂರವಾಗಿರುವ ಕೂಡಲಸಂಗಮ ಪೀಠ ಹಾಗೂ ಹರಿಹರ ಪೀಠ ಒಂದಾಗಬೇಕು. ಇದರಿಂದಾಗಿ ನಮ್ಮ ಸಮಾಜಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು……