Breaking News

ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ರಾಜಕೀಯ ಬೆಂಕಿ..!

ಮಾತಿನ ಫೈಟ್​ಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಎಂಟ್ರಿ....

SHARE......LIKE......COMMENT......

ಬಳ್ಳಾರಿ:

ಲೋಕಸಭೆ ಕ್ಷೇತ್ರದ ಉಪ ಅಖಾಡದಲ್ಲಿ ದಿನದಿನಕ್ಕೂ ರಾಜಕೀಯ ಬೆಂಕಿ ಭುಗಿಲೇಳುತ್ತಲೇ ಇದೆ. ಈವರೆಗೆ ಶ್ರೀರಾಮುಲು ಮತ್ತು ಸಚಿವ ಡಿಕೆ ಶಿವಕುಮಾರ್​ ನಡುವೆ ಏಟು ಎದಿರೇಟು ನಡೀತಿತ್ತು. ಇದೀಗ ಮಾತಿನ ಫೈಟ್​ಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಎಂಟ್ರಿ ಕೊಟ್ಟಿದ್ದಾರೆ. ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ ಇರೋದ್ರಿಂದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜನಾರ್ಧನ ರೆಡ್ಡಿ ಕಾಂಗ್ರೆಸ್​ ನಾಯಕರ ಮೇಲೆ ಗುಡುಗಿದ್ರು.ನನ್ನ ಮೇಲೆ ಲಕ್ಷ ಕೋಟಿ ಆಪಾದನೆ ಮಾಡಿದ್ದ ಕಾಂಗ್ರೆಸ್​ಗೆ ಮಾನವಿಲ್ಲ. ಸಿದ್ದರಾಮಯ್ಯನವರ ಅಕ್ಕಪಕ್ಕದಲ್ಲೇ ಗಣಿ ಅಕ್ರಮ ಮಾಡಿದವರು ಇದ್ದಾರೆ ಎಂದು ನಾಗೇಂದ್ರ ಮತ್ತು ಆನಂದ್​ ಸಿಂಗ್​​ ವಿರುದ್ಧ ಗುಡುಗಿದ್ರು……