ನವದೆಹಲಿ:
ಭಾರತ ರಸ್ತೆಗಳಲ್ಲಿ ಒಂದು ಕಾಲದಲ್ಲಿ ಅಬ್ಬರಿಸಿದ್ದ, ಜನಪ್ರಿಯ ಬೈಕ್ ಜಾವಾದ ಪುನಾರಾಗಮನವಾಗುತ್ತಿದೆ. ನವೆಂಬರ್ 15ರಂದು ಬೈಕ್ನ ಹೊಸ ಮಾಡೆಲ್ ಅನಾವರಣಗೊಳ್ಳಲಿದೆ. ಆ ಕ್ಷಣಕ್ಕಾಗಿ ಜಾವಾ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.ಜಾವಾ ಮೋಟಾರ್ ಸೈಕಲ್ ಅ ಭಾರತಕ್ಕೆ ಪುನರ್ ಪರಿಚಯಿಸುವ ಮಹತ್ವಾಕಾಂಕ್ಷೆ ಹೊಂದಿರುವ ಮಹೀಂದ್ರಾ ಕಂಪನಿ ಕಳೆದ ವಾರವಷ್ಟೇ ಉದ್ದೇಶಿತ ಹೊಸ ಮಾದರಿಯ ಜಾವಾ ಎಂಜಿನ್ ಅನ್ನು ಬಿಡುಗಡೆ ಮಾಡಿತ್ತು.
ಹಳೆ ಶೈಲಿಯ, ಅತ್ಯಾಧುನಿಕ ತಂತ್ರಜ್ಞಾನದ ಎಂಜಿನ್ ಬೈಕ್ ಪ್ರಿಯರ ಮನಸೂರೆ ಮಾಡಿತ್ತು. ಎಂಜಿನ್ಗೇ ಫಿದಾ ಆಗಿದ್ದ ಯುವ ಸಮುದಾಯ ಸಂಪೂರ್ಣ ಬೈಕ್ನ ದರ್ಶನಕ್ಕಾಗಿ ಕಾದು ಕುಳಿತಿರುವಾಗಲೇ ಮಹೀಂದ್ರಾದಿಂದ ಸಂತಸದ ಸಂಗತಿಯೊಂದು ಹೊರ ಬಿದ್ದಿದೆ. ಬರುವ ತಿಂಗಳು, ಅಂದರೆ, ನವೆಂಬರ್ 15ರಂದು ಬೈಕ್ನ ಹೊಸ ರೂಪವನ್ನು ಅನಾವರಣ ಮಾಡುವುದಾಗಿ ಮಹೀಂದ್ರಾ ಘೋಷಿಸಿದೆ.
ಹೀಗಾ ಭಾರತದ ರಸ್ತೆಗಳಲ್ಲಿ ಅಬ್ಬರಿಸುತ್ತಿರುವಫೀ ರಾಯಲ್ ಎನ್ ಫೀಲ್ಡ್ ಕಾಂಪಿಟೇಷನ್ ಎಂದೇ ಬಿಂಬಿತವಾಗಿದ್ದು, ಭಾರತೀಯ ಯುವ ಸಮುದಾಯದಲ್ಲಿ ಹೆಚ್ಚಿನ ನಿರೀಕ್ಷೆಗಳೂ ಇವೆ. ಜಾವಾ ಕಂಪನಿ 1990ರಲ್ಲೇ ಭಾರತದಲ್ಲಿ ತನ್ನ ಬೈಕ್ಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಲ್ಲಿಸಿತ್ತು. ಅದರೊಂದಿಗೆ ಹಳೇ ಜಾವಾ ಬೈಕ್ಗಳು ವಿಂಟೇಜ್, ರೆಟ್ರೋ ಮಾದರಿಗಳಾದವು. ಮೂರು ದಶಕಗಳ ಹಿಂದೆ ಜಾವಾ ಭಾರತದಲ್ಲಿ ತನ್ನ ಸದ್ದು ನಿಲ್ಲಿಸಿತ್ತಾದರೂ, ಅದರ ಅಭಿಮಾನಿ ಬಳಗಕ್ಕೇನೂ ಕಡಿಮೆ ಇರಲಿಲ್ಲ. ಈಗಲೂ ಅದಕ್ಕೆ ದೇಶಾದ್ಯಂತ ಅಭಿಮಾನಿಗಳಿವೆ. ಜಾವಾ ಕ್ಲಬ್ಗಳಿವೆ. ಅಗಾಗ್ಗೆ ಅಭಿಮಾನಿಗಳೆಲ್ಲ ಕೂಡಿ ಅದರ ನೆನಪುಗಳನ್ನು ಮೆಲುಕು ಹಾಕುತ್ತಲೇ ಇರುತ್ತಾರೆ. ಆದರೆ, ಇಷ್ಟು ದಿನ ಸೀಮಿತವಾಗಿದ್ದ ಜಾವಾ ಕ್ಲಬ್ನ ಸದಸ್ಯತ್ಯ ಹೊಸ ಬೈಕ್ನ ಎಂಟ್ರಿಯಿಂದ ಮತ್ತಷ್ಟು ಹಿಗ್ಗುವುದಂತೂ ಪಕ್ಕಾ……