Breaking News

ರೌಡಿ ಶೀಟರ್​ಗಳಿಗೆ ಎಸ್ಪಿ ನೀತಿಪಾಠ……

ಸಮಾಜಘಾತುಕ ಶಕ್ತಿಗಳನ್ನ ಜಿಲ್ಲೆಯಿಂದ ಗಡಿಪಾರು...

SHARE......LIKE......COMMENT......
ಕೋಲಾರ: 

ಶಾಂತಿ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಸಮಾಜಘಾತುಕ ಶಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಚೋಟ್ ಸಫೆಟ್ ಎಚ್ಚರಿಸಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಕೋಲಾರ, ಮಾಲೂರು, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲೂಕುಗಳ ವ್ಯಾಪ್ತಿ ಠಾಣೆಗಳಲ್ಲಿನ 250ಕ್ಕೂ ಹೆಚ್ಚು ರೌಡಿ ಶೀಟರ್​ಗಳ ಪರೇಡ್ ನಡೆಸಿದ ಅವರು ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ನಾಗರಿಕರಾಗಿ ಭಾಳ್ವೆ ನಡೆಸುವಂತೆ ನೀತಿ ಪಾಠ ಹೇಳಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಗಂಜಾ ಮಾರಾಟಗಾರರ ಹಾವಳಿ ಹೆಚ್ಚಾಗಿದೆ, ಜೂಜು ಹಾಗೂ ಅನಧಿಕೃವಾಗಿ ಗುಂಪು ಸೇರಿ ಬಾರ್, ಟೀ ಸ್ಟಾಲ್​ಗಳ ಬಳಿ ನಡೆಯುವ ಗಲಾಟೆಗಳಿಗೆ ರೌಡಿ ಶೀಟರ್​ಗಳ ಕುಮ್ಮಕ್ಕಿದೆ ಎಂಬ ಮಾಹಿತಿ ಇದೆ. ರೌಡಿ ಶೀಟರ್​ಗಳು ಪ್ರಕರಣಗಳಲ್ಲಿ ಸಿಕ್ಕಿಬಿದ್ದಲ್ಲಿ ಮುಲಾಜಿಲ್ಲದೆ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಕುಮಾರ್, ಡಿವೈಎಸ್ಪಿ ಉಮೇಶ್​ಕುಮಾರ್, ನಗರಠಾಣೆ ವೃತ್ತ ನಿರೀಕ್ಷಕ ಫಾರೂಖ್, ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ್ ಹಾಗೂ ವಿವಿಧ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.

ನೆಮ್ಮದಿಯಿಂದ ಬದುಕಲು ಬಿಡಿ ಎಂದ ರೌಡಿ ಶೀಟರ್​ಗಳುನಾವೀಗ ಗಲಾಟೆಗಳಿಗೆ ಹೋಗದೆ ನ್ಯಾಯವಾಗಿ ಬದುಕುತ್ತಿದ್ದೇವೆ, ಯಾರೋ ಮಾಡುವ ತಪ್ಪಿಗೆ ನಮ್ಮನ್ನು ಠಾಣೆಗೆ ಕರೆತಂದು ಪ್ರಶ್ನಿಸಲಾಗುತ್ತಿದೆ, ರೌಡಿ ಶೀಟರ್ ಪಟ್ಟಿಯಿಂದ ನಮ್ಮ ಹೆಸರು ತೆರವುಗೊಳಿಸಿ ನೆಮ್ಮದಿಯಿಂದ ಬದುಕಲು ಅವಕಾಶ ನೀಡುವಂತೆ ಕೆಲವರು ಕೇಳಿಕೊಂಡರು.

ನಿಮ್ಮ ಮೇಲೆ ನಮಗೆ ವೈಯುಕ್ತಿ ದ್ವೇಷಗಳಿಲ್ಲ, ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕೆಲವು ಅಹಿತಕರ ಘಟನೆಗಳ ಹಿಂದೆ ರೌಡಿ ಶೀಟರ್​ಗಳ ಕೈವಾಡವಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ, ಈ ಕಾರಣದಿಂದ ಪರೇಡ್ ನಡೆಸುತ್ತಿದ್ದು, ಇನ್ನು ಮುಂದೆ ದೂರು ಬರದಂತೆ ಸಭ್ಯವಾಗಿ ವರ್ತಿಸಿದಲ್ಲಿ ರೌಡಿ ಶೀಟರ್​ನಿಂದ ಹೆಸರು ತೆಗೆಯುವುದಾಗಿ ಎಸ್​ಪಿ ತಿಳಿಸಿದರು. ಕಳವು, ದರೋಡೆ, ಕೊಲೆ, ಗಲಭೆ ಗದ್ದಲ ತಡೆಗಟ್ಟುವ ಸಲುವಾಗಿ ನಿಮ್ಮಲ್ಲಿ ಏನಾದರೂ ಮಾಹಿತಿ ಇದ್ದರೆ ಹತ್ತಿರದ ಠಾಣೆಗೆ ತಿಳಿಸಿ. ಪ್ರಚೋದನೆಗೆ ಒಳಗಾಗಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ನೀವು ನಮಗೆ ಸಹಕಾರ ನೀಡಿದರೆ ನಾವೂ ನಿಮ್ಮ ನೆರವಿಗೆ ನಿಲ್ಲುತ್ತವೆ ಎಂದರು……