Breaking News

ವಿದೇಶಕ್ಕಿಂತ HAL ಯುದ್ಧ ವಿಮಾನ ದುಬಾರಿ..!

ರಕ್ಷಣಾ ಇಲಾಖೆಯ ಲೆಕ್ಕಪರಿಶೋದನಾ ವರದಿ ...

SHARE......LIKE......COMMENT......

ನವದೆಹಲಿ:

HAL ಯುದ್ಧ ವಿಮಾನ ,ವಿದೇಶಿ ವಿಮಾನಕ್ಕಿಂತ  ದುಬಾರಿ, ಎಂದು ರಕ್ಷಣಾ ಇಲಾಖೆ ಲೆಕ್ಕಪರಿಶೋದನಾ ವರದಿ ಮಾಡಿದೆ,ದೇಶದೆಲ್ಲಡೆ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಕುರಿತು ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಸ್ವದೇಶಿ ಸಂಸ್ಥೆ ಹೆಚ್ಎಎಲ್ ನಿರ್ಮಿಸುತ್ತಿರುವ ಯುದ್ಧ ವಿಮಾನಗಳು ವಿದೇಶಿ ಕಂಪನಿಗಳು ನಿರ್ಮಿಸುತ್ತಿರುವ ಅದೇ ಗುಣಮಟ್ಟದ ಯುದ್ಧ ವಿಮಾನಗಳಿಂತ ದುಬಾರಿ ಎಂಬುದು ರಕ್ಷಣಾ ಇಲಾಖೆಯ ಲೆಕ್ಕ ಪರಿಶೋಧನಾ ವರದಿಯಿಂದ ತಿಳಿದುಬಂದಿದೆ.

ರಷ್ಯಾ ಸುಖೋಯ್-30ಎಂಕೆಐ ಯುದ್ಧ ವಿಮಾನ ದರ ರೂ.269.77 ಕೋಟಿ ಆದರೆ, ಹೆಚ್ಎಎಲ್’ನಲ್ಲಿ ಉತ್ಪಾದನೆಯಾಗುವ ಇದೇ ವಿಮಾನದ ಬೆಲೆ ರೂ.417.69 ಕೋಟಿ ಏರಿಕೆಯಾಗುತ್ತದೆ. ಇದರಿಂದ ಹೆಚ್ಎಎಲ್’ನಲ್ಲಿ ತಯಾರಾಗುವ ಯುದ್ಧ ವಿಮಾನವೊಂದಕ್ಕೆ ವಿದೇಶಿ ವಿಮಾನಕ್ಕೆ ನೀಡಲಾಗುವ ದರಕ್ಕಿಂತ ಹೆಚ್ಚುವರಿ ರೂ.150 ಕೋಟಿ ತೆರಬೇಕಾಗುತ್ತದೆ. ಅದೇ ರೀತಿ, ಬ್ರಿಟಿಷ್ ಏರೋಸ್ಪೇಸ್ ಉತ್ಪಾದಿಸುವ ಹಾಕ್ ತರಬೇತಿ ವಿಮಾನ ದರ ಮತ್ತು ಹೆಚ್ಎಎಲ್ ಉತ್ಪಾದಿಸುವ ಅದೇ ವಿಮಾನದ ದರಕ್ಕೂ ಭಾರೀ ವ್ಯತ್ಯಾಸವಿದೆ ಎಂದು ವರದಿ ಮಾಡಿದೆ…..