ಶಬರಿಮಲೆ:
ಮಹಿಳೆಯರಿಗೆ ಶಬರಿ ಮಲೆ ಪ್ರವೇಶ ಕಲ್ಪಿಸುವ ಸುಪ್ರೀಂಕೋರ್ಟ್ ತೀರ್ಪಿಗೆ ಅಯ್ಯಪ್ಪ ಭಕ್ತ ಸಮುದಾಯದಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗುತ್ತಿದ್ದರೂ ದೇವಾಲಯಕ್ಕೆ ಭೇಟಿ ನೀಡುವುದಾಗಿ ಭೂ ಮಾತಾ ಬ್ರಿಗೇಡ್ ಸ್ಥಾಪಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಹೇಳಿದ್ದಾರೆ……
ಶಬರಿಮಲೆ ಭೇಟಿ ದಿನವನ್ನು ಶೀಘ್ರದಲ್ಲಿಯೇ ಘೋಷಿಸುವುದಾಗಿ ತಿಳಿಸಿರುವ ತೃಪ್ತಿ ದೇಸಾಯಿ, ತನ್ನೊಬ್ಬಳೇ ಯಾತ್ರೆ ಕೈಗೊಳ್ಳುವುದಿಲ್ಲ. ಬದಲಾಗಿ ಮಹಿಳೆಯರ ಗುಂಪಿನೊಂದಿಗೆ ಭೇಟಿ ನೀಡುವುದಾಗಿ ಹೇಳಿದ್ದು, ಸುಪ್ರೀಂಕೋರ್ಟ್ ತೀರ್ಪನ್ನು ಎಲ್ಲರೂ ಹೃದಯಪೂರ್ವಕವಾಗಿ ಸ್ವಾಗತಿಸಬೇಕೆಂದು ಕರ್ನಾಟಕ ಮೂಲದ ಹೋರಾಟಗಾರ್ತಿ ಮನವಿ ಮಾಡಿಕೊಂಡಿದ್ದಾರೆ……