ಕೊಪ್ಪಳ:
ಪಶುವೈದ್ಯರ ಬೇಜಾವಾಬ್ದಾರಿ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸತ್ತ ಕುರಿಗಳನ್ನು ಹಾಕಿದ ಕುರಿಗಾರರು ಪ್ರತಿಭಟನೆ ಮಾಡಿದರು. ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ವಿನೂತನವಾಗಿ ಪ್ರತಿಭಟನೆಯನ್ನ ನಡೆಸಿದ್ರು, ಜಿಲ್ಲೆ ಹಲವು ಭಾಗಗಳಲ್ಲಿ ಕುರಿಗಳು ವಿಚಿತ್ರ ಕಾಯಿಲೆಯಿಂದ ಮರಣವನ್ನು ಹೊಂದುತ್ತಿವೆ ಇದರಿಂದಾಗಿ ಕುರಿಗಾಯಿಗಳಿಗೆ ದಿಕ್ಕು ತೋಚದಂತಾಗಿದೆ ಅಲ್ಲದೆ ಸತ್ತ ಕುರಿಗಳಿಗೆ ಪರಿಹಾರ ಪಡೆಯಲು ಪಶುವೈದ್ಯಾದಿಕಾರಿಯಾದ ಡಾ, ಶಿವರಾಜ್ ಶಟ್ಟರ್ ಕುರಿಗಾಯಿಗಳೊಂದಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಔಷಧಿ ನೀಡಲು ಹಣ ಪೀಕುತ್ತಾನೆ ಇನ್ನು ಕುರಿ ಸತ್ತ ಬಗ್ಗೆ ಧೃಡಿಕರಿಸಿ ಎಂದರೆ ಎರಡರಿಂದ ಮೂರು ಸಾವಿರ ರೂಪಾಯಿ ಲಂಚ ಕೇಳುತ್ತಾನೆ. ಈ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ ಆದರೂ ಯಾವುದೆ ಪ್ರಯೋಜನ ಆಗಿಲ್ಲ ಆದ್ದರಿಂದ ಜಿಲ್ಲೆಯ ಎಲ್ಲಾ ಕುರಿಗಾಯಿಗಳು ಸತ್ತ ಕುರಿಗಳನ್ನು ಜಿಲ್ಲಾಧಿಕಾರಿಗಳ ಆವರಣದಲ್ಲಿ ಇಟ್ಟು ಡಾ. ಶಿವರಾಜ್ ಶಟ್ಟರ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು..
ಇನ್ನು ಸತ್ತಿರುವ ಎಲ್ಲಾ ಕುರಿಗಳಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ರು. ಇನ್ನು ಪಶುವೈದ್ಯಾಧಿಕಾರಿ ಜನಸಾಮಾನ್ಯರ ಮೇಲೆ ದರ್ಪ ತೋರ್ತಾನಂತೆ ಜಾಸ್ತಿ ಮಾತಾಡಿದರೆ ಕೇಸು ಹಾಕಸ್ತಿನಿ ಅಂತಾ ಧಮಕಿ ಹಾಕ್ತಾನಂತೆ. ಇದರ ಮಧ್ಯೆ ಪೊಲೀಸರು ಕುರಿಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಎಂದಾಗ ಕೆಲ ಕಾಲ ಕುರಿಗಾಯಿಗಳ ಹಾಗೂ ಪೋಲೀಸರ ಮಧ್ಯ ಮಾತಿನ ಚಕಮುಕಿ ನಡೆಯಿತು…