Breaking News

ಸರ್ಕಾರಿ ಆಸ್ಪತ್ರೆಗೆ ಡಿಸಿ ರೇಡ್..!

ತಾಲೂಕು ವೈದ್ಯಾಧಿಕಾರಿಗಳಿಗೆ ತರಾಟೆ....

SHARE......LIKE......COMMENT......

ಶಹಾಪುರ: 

ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಇಲ್ಲಿನ ಅವ್ಯವಸ್ಥೆ ಕಂಡು ತಾಲೂಕು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಎಲ್ಲೆಂದರಲ್ಲಿ ಅಸ್ತವ್ಯಸ್ತ ಇದೆ. ಆಸ್ಪತ್ರೆ ಸ್ವತ್ಛತೆಯಿಂದ ಕೂಡಿಲ್ಲ, ಸಮರ್ಪಕ ಬೆಡ್‌ ವ್ಯವಸ್ಥೆ ಇಲ್ಲ. ಹಳೇ ಗಾದಿ ಮಂಚ, ಕುರ್ಚಿಗಳು ಆಸ್ಪತ್ರೆಯ ದುಸ್ಥಿತಿ ಸೂಚಿಸುತ್ತಿವೆ. ಅಲ್ಲದೆ ಸಿಬ್ಬಂದಿ ಕರ್ತವ್ಯ ಲೋಪ ಕಂಡು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಸಿ ಕ್ಯಾಮರಾ ಚಾಲನೆಯಲ್ಲಿಲ್ಲ,ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲ, ಅಂದರೆ ಹೇಗೆ?ಮೊದಲು ದುರಸ್ತಿಗೊಳಿಸಿ ಅಳವಡಿಸಿ ಎಂದು ಇಲ್ಲಿನ ಆರೋಗ್ಯ  ಅಧಿಕಾರಿ ಡಾ| ರಮೇಶ ಗುತ್ತೇದಾರ ಅವರಿಗೆ ಸೂಚಿಸಿದರು……