ಬೆಂಗಳೂರು:
ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್ರ 9ನೇ ಪುಣ್ಯಸ್ಮರಣೆ. ನಾಡಿನಾದ್ಯಂತ ಇಂದು ಪುಣ್ಯಸ್ಮರಣೆಯಲ್ಲಿ ಮುಳುಗಿರುವ ದಾದಾ ಅಭಿಮಾನಿಗಳು ವಿಷ್ಣುವರ್ಧನ್ ಪುಣ್ಯತಿಥಿ ಹಿನ್ನೆಲೆಯಲ್ಲಿ ಅಭಿಮಾನಿಗಳು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಅಲ್ಲದೇ ಅನ್ನದಾನ, ರಕ್ತದಾನ, ನೇತ್ರ ಚಿಕಿತ್ಸೆ, ಆರೋಗ್ಯ ತಪಾಸಣೆ ಕೂಡ ಹಮ್ಮಿಕೊಂಡಿದ್ದಾರೆ.
ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ್ ಅವರು ಅಭಿಮಾನ್ ಸ್ಟುಡಿಯೋಗೆ ಪೂಜೆ ಸಲ್ಲಿಸಲು ಬರೋದು ಅನುಮಾನವಾಗಿದೆ. ಕಾರಣ ಮೈಸೂರಿನಲ್ಲಿ ಗುರುತಿಸಲಾಗಿರುವ ಜಾಗದಲ್ಲೇ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ……