ನವದೆಹಲಿ:
ಸಿಬಿಐ ಗೆ ಹೊಸ ನಿರ್ದೇಶಕ ನೇಮಕ..! ಯೆಸ್ ಮೋದಿ ನೇತೃತ್ವದ ಸಮಿತಿ ಹೊಸ ಸಿಬಿಐ ಗೆ ಹೊಸ ನಿರ್ದೇಶಕರನ್ನು ನೇಮಿಸಲು ಇದೇ ಜನವರಿ 24ರಂದು ಸಭೆ ಕರೆದಿದೆ…ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ (ಸಿಜೆಐ), ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಸದಸ್ಯರು ಇದ್ದಾರೆ.
ಮೋದಿ ಸರಕಾರ ಸಿಬಿಐ ನಿರ್ದೇಶಕ ಆಲೋಕ್ ವರ್ಮಾ ಅವರನ್ನು ಹುದ್ದೆಯಿಂದ ಕಿತ್ತು ಹಾಕಿ ಅವರನ್ನು ಅಗ್ನಿ ಶಾಮಕ ಸೇವೆಗಳ ಮಹಾ ನಿರ್ದೇಶಕರನ್ನಾಗಿ ನೇಮಿಸಿದ್ದ ಕಾರಣ ಸಿಬಿಐ ನಿರ್ದೇಶಕರ ಹುದ್ದೆ ತೆರವಾಗಿತ್ತು.ಈ ಹಿನ್ನಲೆಯಲ್ಲಿ ಸಿಬಿಐ ಗೆ ಕಾಯಂ ನಿರ್ದೇಶಕರನ್ನು ನೇಮಿಸುವ ದಿಶೆಯಲ್ಲಿ ಉನ್ನತಾಧಿಕಾರದ ಸಮಿತಿಯ ಸಭೆಯನ್ನು ಬೇಗನೆ ನಡೆಸುವಂತೆ ಖರ್ಗೆ ಅವರು ಪ್ರಧಾನಿಗೆ ಪತ್ರ ಬರೆದಿದ್ದರು.ಆದಕಾರಣ ಜ.24ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಸಭೆ ಸೇರಲಿದೆ….