ಹಿಮಾಚಲ ಪ್ರದೇಶ:
ಹಿಮಾಚಲ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಶಿಮ್ಲಾ, ಮನಾಲಿ, ಡಲ್ಹೌಜಿ ಹಾಗೂ ಕುಲುವಿನ ಹಲವೆಡೆ ಹಿಮಪಾತವಾಗಿದ್ದು, ಎಲ್ಲೆಲ್ಲೂ ಮಂಜು ಆವರಿಸಿದೆ. ಥಂಡಿ ಜಿಲ್ಲೆಯ ಲಹೌಲ್ ಹಾಗೂ ಸ್ಪಿತಿ ಪ್ರದೇಶದಲ್ಲಿ ಭಾರಿ ಹಿಮಪಾತದಿಂದ ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿನ ಪರಿಸ್ಥಿತಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಸದ್ಯ ಹಿಮಪಾತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ……